IND vs NZ Test: ಬೆಂಗಳೂರು ಬಾಯ್ ರಚಿನ್ ರವೀಂದ್ರ ಶತಕದ ಅಬ್ಬರ

Krishnaveni K

ಶುಕ್ರವಾರ, 18 ಅಕ್ಟೋಬರ್ 2024 (12:07 IST)
Photo Credit: X
ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಪರ ಬೆಂಗಳೂರು ಹುಡುಗ ರಚಿನ್ ರವೀಂದ್ರ ಅಬ್ಬರದ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಕಿವೀಸ್ ಮೂರನೇ ದಿನದ ಭೋಜನ ವಿರಾಮದ ವೇಳೆಗೆ 7 ವಿಕೆಟ್ ನಷ್ಟಕ್ಕೆ 345 ರನ್ ಗಳಿಸಿದೆ.

ಮೊದಲ ಇನಿಂಗ್ಸ್ ನಲ್ಲಿ ಭಾರತ ಕೇವಲ 46 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದು ಈಗಾಗಲೇ ಬರೋಬ್ಬರಿ 299 ರನ್ ಗಳ ಬೃಹತ್ ಮುನ್ನಡೆ ಪಡೆದಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಟೀಂ ಇಂಡಿಯಾ ಹೀನಾಯ ಸೋಲಿನತ್ತ ಮುಖ ಮಾಡಿದೆ.

ಒಟ್ಟು 125 ಎಸೆತ ಎದುರಿಸಿರುವ ರಚಿನ್ 2 ಸಿಕ್ಸರ್ ಗಳೊಂದಿಗೆ 104 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಅವರಿಗೆ 49 ರನ್ ಗಳಿಸಿರುವ ಟಿಮ್ ಸೌಥೀ ಸಾಥ್ ನೀಡುತ್ತಿದ್ದಾರೆ. ಭಾರತದ ಪರ ರವೀಂದ್ರ ಜಡೇಜಾ 3, ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ತಲಾ 1 ವಿಕೆಟ್ ಕಬಳಿಸಿದ್ದಾರೆ.

ಸದ್ಯದ ಪರಿಸ್ಥಿತಿ ನೋಡಿದರೆ ಭಾರತವನ್ನು ಮಳೆಯೇ ಕಾಪಾಡಬೇಕು. ಮುಂದಿನ ಎರಡೂವರೆ ದಿನದಲ್ಲಿ ಭಾರತ ಹಿನ್ನಡೆ ಮೊತ್ತವನ್ನು ದಾಟಿ ನ್ಯೂಜಿಲೆಂಡ್ ಗೆ ಪೈಪೋಟಿಕರ ಗೆಲುವಿನ ಮೊತ್ತ ಹಾಕಿಕೊಡುವುದು ಅಷ್ಟು ಸುಲಭವಲ್ಲ. ಭಾರತಕ್ಕೆ ಈ ಸೋಲು ಡಬ್ಲ್ಯುಟಿಸಿ ಫೈನಲ್ ಅಂಕಪಟ್ಟಿಯ ಮೇಲೂ ಪರಿಣಾಮ ಬೀರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ