ದೆಹಲಿ: ಇಂದು ವೆಸ್ಟ್ ಇಂಡೀಸ್ ವಿರುದ್ಧ ಬೇಗನೇ ಆಟ ಮುಗಿಸಿ ಟೀಂ ಇಂಡಿಯಾ ಆಟಗಾರರು ನೇರವಾಗಿ ಆಸ್ಟ್ರೇಲಿಯಾಗೆ ಶಿಫ್ಟ್ ಆಗಲಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಕೆಲವೇ ನಿಮಿಷದಲ್ಲಿ ಮುಕ್ತಾಯವಾಗಲಿದೆ. ಇಂದು ಭಾರತ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವುದು ಖಚಿತವಾಗಿದೆ. ಈ ಪಂದ್ಯ ಮುಗಿದೊಡನೇ ಟೀಂ ಇಂಡಿಯಾ ಆಟಗಾರರಿಗೆ ಆಸ್ಟ್ರೇಲಿಯಾಗೆ ತೆರಳುವ ಧಾವಂತವಿದೆ.
ಯಾಕೆಂದರೆ ಅಕ್ಟೋಬರ್ 19 ರಿಂದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆರಂಭವಾಗಲಿದ್ದು, ಇದಕ್ಕೂ ಶುಭಮನ್ ಗಿಲ್ ಅವರೇ ನಾಯಕರು. ಅವರ ಜೊತೆಗೆ ಟೆಸ್ಟ್ ತಂಡದಲ್ಲಿರುವ ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಧ್ರುವ ಜ್ಯುರೆಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್ ತಂಡದಲ್ಲಿದ್ದಾರೆ.
ನಾಳೆ ಟೆಸ್ಟ್ ತಂಡದಲ್ಲಲ್ಲದ ಆಟಗಾರರು ಮೊದಲ ಹಂತದಲ್ಲಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದ್ದಾರೆ. ಇದೀಗ ಟೆಸ್ಟ್ ತಂಡದಲ್ಲಿರುವ ಆಟಗಾರರು ಒಂದು ದಿನ ವಿಶ್ರಾಂತಿ ಪಡೆದು ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದ್ದಾರೆ.