ರೋಹಿತ್ ಶರ್ಮಾರನ್ನು ನೋಡಿ ಅತ್ತೇ ಬಿಟ್ಟ ಬಾಲಕ: ಹಿಟ್ ಮ್ಯಾನ್ ರಿಯಾಕ್ಷನ್ ವಿಡಿಯೋ ನೋಡಿ
ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿರುವ ರೋಹಿತ್ ಶರ್ಮಾ ನಿನ್ನೆ ಮುಂಬೈನಲ್ಲಿ ಅಭ್ಯಾಸ ನಡೆಸಿದರು. ಅವರು ಅಭ್ಯಾಸ ನಡೆಸುವುದನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳ ಸಾಗರವೇ ಹರಿದುಬಂದಿತ್ತು.
ಇನ್ನೇನು ಅಭ್ಯಾಸ ಮುಗಿಸಿ ಅವರು ಹೊರಡುವ ವೇಳೆಗೆ ಕೆಲವು ಮಕ್ಕಳು ಅವರ ಬಳಿ ಆಟೋಗ್ರಾಫ್ ಗಾಗಿ ಬಂದಿದ್ದರು. ಓರ್ವ ರೋಹಿತ್ ಕಡೆಗೆ ಬರಲು ಹೊರಟಾಗ ಭದ್ರತಾ ಸಿಬ್ಬಂದಿ ತಡೆದರು. ಆಗ ಸ್ವತಃ ರೋಹಿತ್ ಅವರನ್ನು ಬಿಡುವಂತೆ ಸೂಚಿಸಿದರು.
ಮತ್ತೊಬ್ಬ ಬಾಲಕ ರೋಹಿತ್ ಬಳಿ ಬಂದು ಟಿ ಶರ್ಟ್ ಮೇಲೆ ಸಹಿ ಹಾಕಿಸಿಕೊಂಡಿದ್ದಾನೆ. ರೋಹಿತ್ ರನ್ನು ಹತ್ತಿರದಿಂದ ನೋಡಿದ ಬಾಲಕನ ಖುಷಿಗೆ ಮೇರೆಯೇ ಇರಲಿಲ್ಲ. ಆಟೋಗ್ರಾಫ್ ಪಡೆದಾಗ ಗಳ ಗಳನೇ ಅತ್ತು ಬಿಟ್ಟ. ಆಗ ಸ್ವತಃ ರೋಹಿತ್ ಬೆನ್ನು ತಟ್ಟಿ ಕಳುಹಿಸಿದರು. ಆದರೂ ಬಾಲಕ ಕಣ್ಣೀರು ಒರೆಸುತ್ತಲೇ ಖುಷಿಯಿಂದ ಅಲ್ಲಿಂದ ತೆರಳಿದ್ದಾನೆ. ಈ ವಿಡಿಯೋ ಈಗ ವೈರಲ್ ಆಗಿದೆ.