ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 190ಕ್ಕೆ ನಾಲ್ಕು ವಿಕೆಟ್ : 402 ರನ್ ಲೀಡ್‌

ಶನಿವಾರ, 5 ಡಿಸೆಂಬರ್ 2015 (18:27 IST)
ಒಂದು ಹಂತದಲ್ಲಿ 57ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಭಾರತ ದಿನದಾಟ ಮುಗಿದಾಗ ಅಷ್ಟೇ ವಿಕೆಟ್‌ಗೆ 190 ರನ್‌ವರೆಗೆ ಒಯ್ಯುವ ಮೂಲಕ ದಕ್ಷಿಣ ಆಫ್ರಿಕಾ ಗೆಲುವಿನ ಆಸೆ ಬಹುಮಟ್ಟಿಗೆ ಕಮರಿ ಹೋಗಿದೆ. ಭಾರತ ಈಗ 403 ರನ್ ಬೃಹತ್ ಮೊತ್ತದ ಮುನ್ನಡೆ ಸಾಧಿಸಿದ್ದು, ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ವಿಫಲವಾದ ದಕ್ಷಿಣ ಆಫ್ರಿಕಾ ಈ ಪಂದ್ಯವನ್ನು ಗೆಲ್ಲುವ ಆಸೆ ಕ್ಷೀಣಿಸಿದೆ.  ಮೊದಲ ಸೆಷನ್‌ನಲ್ಲಿ ಭಾರತ ಮಾರ್ಕೆಲ್ ಎಸೆತದಲ್ಲಿ ಮುರುಳಿ ವಿಜಯ್ ಮತ್ತು ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು 51 ರನ್ ಮಾಡಿತ್ತು. ಮಧ್ಯಾಹ್ನ ಶಿಖರ್ ಧವನ್ ಮತ್ತು ಪೂಜಾರಾ ವಿಕೆಟ್ ಕಳೆದುಕೊಂಡು 61 ರನ್ ಸೇರಿಸಿತು.
 
ಮಾರ್ಕೆಲ್ ಐದನೇ ಓವರಿನಲ್ಲಿ ವಿಜಯ್ ಬ್ಯಾಟಿನ ತುದಿಗೆ ಚೆಂಡು ತಾಗಿ ವಿಕೆಟ್ ಕೀಪರ್ ಕ್ಯಾಚ್ ಹಿಡಿದಿದ್ದರಿಂದ ಅಂಪೈರ್ ಔಟ್ ಕೊಟ್ಟಿದ್ದರು. ಆದರೆ ರೀಪ್ಲೇನಲ್ಲಿ ಬ್ಯಾಟ್ಸ್‌ಮನ್ ಮುಂಗೈಗೆ ಚೆಂಡು ತಗುಲಿ ಹಾರಿದ್ದನ್ನು ತೋರಿಸಿದೆ. ರೋಹಿತ್ ಕೂಡ ಮಾರ್ಕೆಲ್ ಬೌಲಿಂಗ್‌ನಲ್ಲಿ ಶೂನ್ಯಕ್ಕೆ ಔಟಾದರು.
 
 ಸ್ಕೋರು ವಿವರ: ಭಾರತ ಮೊದಲ ಇನ್ನಿಂಗ್ಸ್ 334 ಎರಡನೇ ಇನ್ನಿಂಗ್ಸ್ 190/4ದ.ಆಪ್ರಿಕಾ ಮೊದಲ ಇನ್ನಿಂಗ್ಸ್‌ 121 ರನ್ 
ಎರಡನೇ ಇನ್ನಿಂಗ್ಸ್ ಮುರಳಿ ವಿಜಯ್ 3 ರನ್, ಶಿಖರ್ ಧವನ್ 21 ರನ್, ರೋಹಿತ್ ಶರ್ಮಾ 0, ಚೇತೇಶ್ವರ್ ಪೂಜಾರಾ 28, ವಿರಾಟ್ ಕೊಹ್ಲಿ 83 ನಾಟೌಟ್, ರೆಹಾನೆ 52 ನಾಟೌಟ್.  ಮಾರ್ನೆ ಮಾರ್ಕೆಲ್ 3 ವಿಕೆಟ್, ಡೀನ್ ಎಲ್ಗರ್ 1 ವಿಕೆಟ್ . 
 

ವೆಬ್ದುನಿಯಾವನ್ನು ಓದಿ