2 ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಎಗೆ 10 ವಿಕೆಟ್ ಜಯ: ಭಾರತಕ್ಕೆ ಸರಣಿ ಸೋಲು

ಶನಿವಾರ, 1 ಆಗಸ್ಟ್ 2015 (14:35 IST)
ಯುವ ಆಟಗಾರರರಿಂದ ಕೂಡಿದ್ದ ಭಾರತ ಎ ತಂಡ ಆಸ್ಟ್ರೇಲಿಯಾ ಎ ವಿರುದ್ಧ 10 ವಿಕೆಟ್‌ಗಳಿಂದ ಸೋಲಪ್ಪುವ ಮೂಲಕ 0-1ರಿಂದ ಸರಣಿ ಸೋಲನ್ನು ಅನುಭವಿಸಿದೆ. ಭಾರತ ಎ ಮೊದಲ ಇನ್ನಿಂಗ್ಸ್‌ನಲ್ಲಿ  135 ರನ್ ಕಳಪೆ ಬ್ಯಾಟಿಂಗ್‌ಗೆ ಉತ್ತರವಾಗಿ ಆಸ್ಟ್ರೇಲಿಯಾ ಎ ಮೊದಲ ಇನ್ನಿಂಗ್ಸ್‌ನಲ್ಲಿ 349 ರನ್ ಮೊತ್ತವನ್ನು ದಾಖಲಿಸಿ 214 ರನ್ ಮುನ್ನಡೆಯನ್ನು ಸಾಧಿಸಿತ್ತು.

ಆಸ್ಟ್ರೇಲಿಯಾ ಎ ಪರ ಕ್ಯಾಮರಾನ್ ಬೆನ್‌ಕ್ರಾಫ್ಟ್  ಶತಕ ದಾಖಲಿಸಿ 150 ರನ್ ಗಳಿಸಿದರು. ಫರ್ಗ್ಯುಸನ್  54 ರನ್ ಬಾರಿಸಿದರು. ಬಾಬಾ ಅಪರಾಜಿತ್ 5 ವಿಕೆಟ್ ಕಬಳಿಸಿದರೆ ಪ್ರಜ್ಞಾನ್ ಓಜಾ 4 ವಿಕೆಟ್ ಕಬಳಿಸಿದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಎ ತಂಡ ಉತ್ತಮ ಮೊತ್ತವನ್ನು ದಾಖಲಿಸಲು ವಿಫಲವಾಯಿತು.

ವಿರಾಟ್ ಕೊಹ್ಲಿ 45 ಮತ್ತು ಅಬಿನವ್ ಮುಕುಂದ್ 59 ಹಾಗೂ ಶ್ರೇಯಸ್ ಅಯ್ಯರ್ 49 ರನ್ ಬಾರಿಸಿದರು. ಅಭಿನವ್ ಮುಕುಂದ್ ಔಟಾದ ಬಳಿಕ ಭಾರತ ಎ ತಂಡದ ಆಟಗಾರರು ಬೇಗನೇ ಔಟಾಗಿ ಪೆವಿಲಿಯನ್ ಹಾದಿ ಹಿಡಿದರು. ಒಂದು ಹಂತದಲ್ಲಿ 4 ವಿಕೆಟ್‌ಗೆ 205 ರನ್‌ಗಳಿದ್ದ ಭಾರತದ ಸ್ಕೋರ್  274ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿದ್ದರಿಂದ ಭಾರತ ಎ ಸೋಲಿನ ಸುಳಿಯಲ್ಲಿ ಸಿಕ್ಕಿಬಿತ್ತು.  ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಎ 62 ರನ್ ಗಳಿಸಿ ಗೆಲುವಿನ ಗುರಿಯನ್ನು ನೋಲಾಸ್‌‌ಗೆ ಮುಟ್ಟಿತು. 

ವೆಬ್ದುನಿಯಾವನ್ನು ಓದಿ