ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸರಣಿ ಡೇಟ್ ಫಿಕ್ಸ್

ಬುಧವಾರ, 7 ಅಕ್ಟೋಬರ್ 2020 (11:01 IST)
ಮುಂಬೈ: ಐಪಿಎಲ್ ಮುಗಿದೊಡನೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕ್ರಿಕೆಟ್ ಸರಣಿ ನಡೆಯಲಿದ್ದು, ಇದರ ವೇಳಾ ಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ನಿಗದಿಗೊಳಿಸಿದೆ.


ನವಂಬರ್ 26 ರಿಂದ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ಆರಂಭವಾಗಲಿದ್ದು, ಅದಾದ ಬಳಿಕ ಟೆಸ್ಟ್ ಸರಣಿಯನ್ನೂ ಆಡಲಿದೆ. ಐಪಿಎಲ್ ಮುಗಿಸಿ ಆಟಗಾರರು ನೇರವಾಗಿ ಆಸ್ಟ್ರೇಲಿಯಾಗೆ ಹಾರಲಿದ್ದು, ಅಲ್ಲಿ ಕೆಲವು ದಿನ ಜೈವಿಕ ಸುರಕ್ಷಾ ವಲಯದಲ್ಲಿ ಉಳಿದುಕೊಳ್ಳಲಿದ್ದಾರೆ. ಕ್ವಾರಂಟೈನ್ ಅವಧಿ ಮುಗಿಸಿ ಬಳಿಕ ಅಭ್ಯಾಸಕ್ಕಿಳಿಯಲಿದ್ದಾರೆ. ಈ ಮೂಲಕ ಕೊರೋನಾ ಬಳಿಕ ಟೀಂ ಇಂಡಿಯಾದ ಮೊದಲ ಕ್ರಿಕೆಟ್ ಸರಣಿ ಇದಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ