ಟೀಂ ಇಂಡಿಯಾಕ್ಕೆ ಭಾರೀ ಮುಖಭಂಗ

ಬುಧವಾರ, 15 ಜನವರಿ 2020 (08:43 IST)
ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಆಸೀಸ್ 10 ವಿಕೆಟ್ ಗಳಿಂದ ಬಗ್ಗು ಬಡಿದಿದೆ. ಇದರೊಂದಿಗೆ ಮೊದಲ ಪಂದ್ಯದಲ್ಲೇ ಅತಿಥೇಯ ತಂಡಕ್ಕೆ ಭಾರೀ ಮುಖಭಂಗವಾಗಿದೆ.


ಇದುವರೆಗೆ ಪ್ರಬಲ ತಂಡವೆಂದೇ ಹೇಳಿಕೊಂಡು ಬರುತ್ತಿರುವ ಟೀಂ ಇಂಡಿಯಾ ಇಷ್ಟು ಸುಲಭವಾಗಿ ಎದುರಾಳಿಗೆ ಶರಣಾಗಿರುವುದು ನೋಡಿ ಭಾರೀ ಟೀಕೆ ವ್ಯಕ್ತವಾಗಿದೆ. 255 ರನ್ ಗಳ ಗೆಲುವಿನ ಗುರಿಯನ್ನು ಆಸ್ಟ್ರೇಲಿಯಾ ಒಂದೇ ಒಂದು ವಿಕೆಟ್ ನಷ್ಟವಿಲ್ಲದೇ ಗುರಿ ತಲುಪಿರುವುದು ಟೀಂ ಇಂಡಿಯಾ ಬೌಲರ್ ಗಳ ಹೀನಾಯ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು.

ಆಸೀಸ್ ಪರ ಆರಂಭಿಕರಾದ ಡೇವಿಡ್ ವಾರ್ನರ್ 128 ಮತ್ತು ನಾಯಕ ಏರನ್ ಫಿಂಚ್ 110 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಆಸೀಸ್ 37.4 ಓವರ್ ಗಳಲ್ಲಿ 258 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ