ಕೊನೆಗೂ ಸಚಿನ್ ತೆಂಡುಲ್ಕರ್ ಶತಕಗಳ ದಾಖಲೆಗೆ ಸಂಚಕಾರ ತಂದಿಟ್ಟ ವಿರಾಟ್ ಕೊಹ್ಲಿ

ಮಂಗಳವಾರ, 14 ಜನವರಿ 2020 (09:18 IST)
ಮುಂಬೈ: ರನ್ ಮೆಷಿನ್ ವಿರಾಟ್ ಕೊಹ್ಲಿಯನ್ನು ಸಚಿನ್ ತೆಂಡುಲ್ಕರ್ ಉತ್ತರಾಧಿಕಾರಿ ಎಂದೇ ಕರೆಯಲಾಗುತ್ತದೆ. ಕ್ರಿಕೆಟ್ ದಿಗ್ಗಜ ಮಾಡಿದ ದಾಖಲೆಗಳನ್ನು ಒಂದೊಂದಾಗಿ ಮುರಿಯುತ್ತಾ ಬಂದಿರುವ ಕೊಹ್ಲಿ ಈಗ ಮತ್ತೊಂದು ಪ್ರಮುಖ ದಾಖಲೆ ಮಾಡಲು ಹೊರಟಿದ್ದಾರೆ.


ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದಿನಿಂದ ಏಕದಿನ ಸರಣಿ ಆರಂಭವಾಗಲಿದ್ದು, ಕೊಹ್ಲಿ ಈ ಸರಣಿಯಲ್ಲಿ ಒಂದು ಶತಕ ಗಳಿಸಿದರೂ ಸಚಿನ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಏಕದಿನ ಪಂದ್ಯಗಳಲ್ಲಿ ಗರಿಷ್ಠ ಶತಕ ಗಳಿಸಿದ ದಾಖಲೆ ಹೊಂದಿರುವ ಸಚಿನ್ ಆ ಪೈಕಿ 20 ಶತಕಗಳನ್ನು ತವರಿನಲ್ಲಿ ಗಳಿಸಿದ್ದರು. ಕೊಹ್ಲಿ ತವರಿನಲ್ಲಿ 19 ಶತಕ ಗಳಿಸಿದ್ದು, ಇನ್ನು ಒಂದು ಶತಕ ಗಳಿಸಿದರೆ ತವರಿನಲ್ಲಿ ಗರಿಷ್ಠ ಏಕದಿನ ಶತಕ ಗಳಿಸಿದ ಸಚಿನ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಅಲ್ಲಿಗೆ ಕೊಹ್ಲಿ ಸಚಿನ್ ಶತಕಗಳ ದಾಖಲೆ ಮುರಿಯುವ ಹಂತಕ್ಕೆ ಬಂದು ನಿಂತಿದ್ದಾರೆ ಎಂದಾಯ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ