ಭಾರತ-ಆಸ್ಟ್ರೇಲಿಯಾ ಮಹಿಳೆಯರ ಟೆಸ್ಟ್: ಭಾರತದ ಗೆಲುವಿಗೆ 75 ರನ್ ಗುರಿ
ಭಾನುವಾರ, 24 ಡಿಸೆಂಬರ್ 2023 (10:52 IST)
ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹಿಳೆಯರ ಟೆಸ್ಟ್ ಪಂದ್ಯವನ್ನು ಗೆಲ್ಲಲು ಭಾರತಕ್ಕೆ ಆಸೀಸ್ 75 ರನ್ ಗಳ ಸುಲಭ ಗುರಿ ನೀಡಿದೆ.
ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 219 ಮತ್ತು ಭಾರತ 406 ರನ್ ಗಳಿಸಿತ್ತು. ಎರಡನೇ ಸರದಿ ಆರಂಭಿಸಿದ ಆಸ್ಟ್ರೇಲಿಯಾ 261 ರನ್ ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತಕ್ಕೆ 75 ರನ್ ಗಳ ಗುರಿ ಸಿಕ್ಕಿದೆ.
ಎರಡನೇ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಪರ ತಹ್ಲಿಯಾ ಮೆಕ್ ಗ್ರಾತ್ 73, ಎಲ್ಲಿಸ್ ಪೆರಿ 45 ತನ್ ಗಳಿಸಿದರು. ಭಾರತದ ಪರ ಸ್ನೇಹ ರಾಣಾ 4,ಹರ್ಮನ್ ಪ್ರೀತ್ ಕೌರ್, ರಾಜೇಶ್ವರಿ ಗಾಯಕ್ ವಾಡ್ ತಲಾ 2, ಪೂಜಾ ವಸ್ತ್ರಾಕರ್ 1 ವಿಕೆಟ್ ಕಬಳಿಸಿದರು.
ನಿನ್ನೆ ಎರಡನೇ ಇನಿಂಗ್ಸ್ ನಲ್ಲಿ ಐದು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾಗೆ ಇಂದು ಆರಂಭದಲ್ಲೇ ಪೂಜಾ ವಸ್ತ್ರಾಕರ್ ವಿಕೆಟ್ ಕಬಳಿಸುವ ಮೂಲಕ ಬ್ರೇಕ್ ಥ್ರೂ ನೀಡಿದರು. ಇದಾದ ಬಳಿಕ ಆಸೀಸ್ ಬೇಗನೇ ಕುಸಿತ ಕಂಡಿತು.