ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ಗೆ ಹೊಸ ದಾಖಲೆ ಬರೆಯುವ ಅವಕಾಶವೊಂದು ಎದುರಾಗಿದೆ.
ಇದುವರೆಗೆ ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಅದ್ಭುತ ನಿರ್ವಹಣೆ ತೋರಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಬ್ಯಾಟಿಂಗ್ ನ ಬಲವಾಗಿದ್ದಾರೆ. ತಂಡಕ್ಕೆ ಉತ್ತಮ ಆರಂಭ ನೀಡುವುದರ ಜೊತೆಗೆ ಸಂಕಷ್ಟದಲ್ಲಿದ್ದಾಗಲೂ ಸಾಥ್ ಕೊಡುತ್ತಿದ್ದಾರೆ.
ಇದೀಗ ನಾಲ್ಕನೇ ಪಂದ್ಯದಲ್ಲೂ ಇಂಗ್ಲೆಂಡ್ ಟಾರ್ಗೆಟ್ ಮಾಡುವುದು ಕೆಎಲ್ ರಾಹುಲ್ ವಿಕೆಟ್ ನ್ನೇ. ಆದರೆ ರಾಹುಲ್ ಫಾರ್ಮ್ ನೋಡಿದರೆ ಅವರು ನಾಲ್ಕನೇ ಪಂದ್ಯದಲ್ಲಿ ಅಪರೂಪದ ದಾಖಲೆಯೊಂದನ್ನು ಬರೆಯಬಹುದಾಗಿದೆ.
ಇಂಗ್ಲೆಂಡ್ ನಲ್ಲಿ 1000 ರನ್ ಪೂರೈಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ರಾಹುಲ್ ಸ್ಥಾನ ಪಡೆಯಬಹುದಾಗಿದೆ. ಇದಕ್ಕಾಗಿ ಅವರು 11 ರನ್ ಗಳಿಸಿದರೆ ಸಾಕು. ಈ ಪಟ್ಟಿಯಲ್ಲಿ ಈಗ ಕೇವಲ ಮೂವರು ಆಟಗಾರರಿದ್ದಾರೆ. 1575 ರನ್ ಗಳಿಸಿದ ಸಚಿನ್ ಮೊದಲ ಸ್ಥಾನದಲ್ಲಿದ್ದರೆ 1376 ರನ್ ಗಳಿಸಿದ ದ್ರಾವಿಡ್ ಎರಡನೇ ಸ್ಥಾನ ಮತ್ತು ಮೂರನೇ ಸ್ಥಾನದಲ್ಲಿ 1152 ರನ್ ಗಳಿಸಿದ ಸುನಿಲ್ ಗವಾಸ್ಕರ್ ಇದ್ದಾರೆ. ಇದೀಗ ರಾಹುಲ್ 989 ರನ್ ಗಳಿಸಿದ್ದು 11 ರನ್ ಗಳಿಸಿದರೆ ಈ ಅಪರೂಪದ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.