ಪಿಂಕ್ ಬಾಲ್ ನಲ್ಲಿ ಆಡಲು ಭಾರತ-ಬಾಂಗ್ಲಾ ಭರ್ಜರಿ ಪ್ರಾಕ್ಟೀಸ್

ಮಂಗಳವಾರ, 19 ನವೆಂಬರ್ 2019 (10:06 IST)
ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನವಂಬರ್ 22 ರಿಂದ ಕೋಲ್ಕೊತ್ತಾದ ಈಡನ್ ಗಾರ್ಡನ್ ನಲ್ಲಿ ದ್ವಿತೀಯ ಟೆಸ್ಟ್ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದ್ದು, ಇದಕ್ಕಾಗಿ ಉಭಯ ತಂಡಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ.


ಪಿಂಕ್ ಬಾಲ್ ನಲ್ಲಿ ಆಡಲು ಭಾರತ ತಂಡ ಈಗಾಗಲೇ ಕಠಿಣ ತರಬೇತಿ ಪಡೆಯುತ್ತಿದೆ. ನೆಟ್ಸ್ ನಲ್ಲಿ ಪಿಂಕ್ ಬಾಲ್ ನ್ನೇ ಬಳಸಿ ಅಭ್ಯಾಸ ಮಾಡುತ್ತಿದೆ.

ಇನ್ನೊಂದೆಡೆ ಬಾಂಗ್ಲಾ ಬೌಲರ್ ಗಳು ಒದ್ದೆ ಬಾಲ್ ನಲ್ಲಿ ಆಡುವ ಮೂಲಕ ಹೊನಲು ಬೆಳಕಿನಲ್ಲಿ ಆಡಲು ತಯಾರಿ ನಡೆಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಪಿಂಕ್ ಬಾಲ್ ನಲ್ಲಿ ಆಡುವ ಕಾರಣ, ಉಭಯ ತಂಡಗಳಿಗೆ ಇದು ಹೊಸ ರೀತಿಯ ಪರೀಕ್ಷೆಯಾಗಲಿದೆ. ಈ ಪಂದ್ಯವನ್ನು ಗೆಲ್ಲುವುದು ಎರಡೂ ತಂಡಗಳಿಗೆ ಪ್ರತಿಷ್ಠೆಯ ಕಣವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ