ಭಾರತ-ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾ 329 ಕ್ಕೆ ಆಲೌಟ್

ಭಾನುವಾರ, 14 ಫೆಬ್ರವರಿ 2021 (10:15 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ದಿನ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ 329 ರನ್ ಗಳಿಗೆ ಆಲೌಟ್ ಆಗಿದೆ.


ಭಾರತದ ಪರ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಅಜೇಯ 58 ರನ್ ಗಳಿಸಿ ಮಿಂಚಿದರು. ಆದರೆ ಉಳಿದವರು ಅವರಿಗೆ ತಕ್ಕ ಸಾಥ್ ನೀಡದೇ ಭಾರತ ಬೇಗನೇ ಸರ್ವಪತನ ಕಂಡಿತು. ಇಂಗ್ಲೆಂಡ್ ಪರ ಓಲಿ ಸ್ಟೋನ್ 3, ಮೊಯಿನ್ ಅಲಿ 4,  ಜ್ಯಾಕ್ ಲೀಚ್ 2 ಮತ್ತು ನಾಯಕ ಜೋ ರೂಟ್ 1 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ