ಭಾರತ ಬಾಂಗ್ಲಾದೇಶ ಏಕೈಕ ಟೆಸ್ಟ್ ಪಂದ್ಯ ಮುಂದೂಡಿಕೆ
ನಿಗದಿಯಂತೆ ಇದು ಫೆಬ್ರವರಿ 8 ಕ್ಕೆ ನಡೆಯಬೇಕಿತ್ತು. ಒಂದು ದಿನ ತಡವಾಗಿ ಆರಂಭಿಸುವುದು ಎಲ್ಲಾ ದೃಷ್ಟಿಯಿಂದ ಉತ್ತಮ. ನಮಗೆ ಹೆಚ್ಚಿನ ವೀಕ್ಷಕಕರೂ ಸಿಗಬಹುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಆದರೆ ನಿಜ ಕಾರಣವೇನೆಂಬುದು ಇನ್ನೂ ತಿಳಿದು ಬಂದಿಲ್ಲ.
ಐಸಿಸಿಯಿಂದ ಟೆಸ್ಟ್ ಮಾನ್ಯತೆ ಪಡೆದ ಬಳಿಕ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ಭಾರತದಲ್ಲಿ ಸರಣಿ ಆಡಲು ಬರುತ್ತಿದೆ. ಸದ್ಯ ಆ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿದೆ.