ಭಾರತ-ಇಂಗ್ಲೆಂಡ್ ಏಕದಿನ ಸರಣಿಗೆ ನಡೆಯುವುದೇ ಅನುಮಾನ

ಬುಧವಾರ, 4 ಜನವರಿ 2017 (10:35 IST)
ನವದೆಹಲಿ: ಎಲ್ಲಾ ಸುಪ್ರೀಂ ಕೋರ್ಟ್ ತೀರ್ಪಿನ ಮಾಯೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಬೇಕಿದ್ದ ಏಕದಿನ ಮತ್ತು ಟಿ-ಟ್ವೆಂಟಿ ಸರಣಿ ನಡೆಯುವುದೇ ಅನುಮಾನ ಎಂಬಂತಾಗಿದೆ.

ಲೋಧಾ ಸಮಿತಿಯ ವರದಿ ಜಾರಿಗೆ ಅಡ್ಡಿಪಡಿಸುತ್ತಿರುವ ಕಾರಣ ನೀಡಿ, ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಉನ್ನತ ಅಧಿಕಾರಿಳಿಲ್ಲದೇ, ಪಂದ್ಯ ಆಯೋಜಿಸುವ ರೂಪು ರೇಷೆ ಬಗ್ಗೆ ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಗೊಂದಲಗಳಿವೆ. ಹೀಗಿರುವಾಗ ಪಂದ್ಯ ನಡೆಸಬೇಕೋ ಬೇಡವೋ ಎನ್ನುವ ಚರ್ಚೆ ನಡೆಯುತ್ತಿದೆ.

ಒಂದು ಕ್ರಿಕೆಟ್ ಪಂದ್ಯ ಆಯೋಜಿಸುವ ವಿಷಯದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಜವಾಬ್ದಾರಿ ಹೆಚ್ಚಿರುತ್ತದೆ. ಆದರೆ ಲೋಧಾ ಸಮಿತಿ ವರದಿ ಜಾರಿಯಾದ ಹಿನ್ನಲೆಯಲ್ಲಿ ಉನ್ನತ ಅಧಿಕಾರಿಗಳೆಲ್ಲಾ ಅಧಿಕಾರ ಕಳೆದುಕೊಂಡಿದ್ದಾರೆ. ಹೀಗಿರುವಾ ಪಂದ್ಯ ಆಯೋಜಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರು ಯಾರು ಎನ್ನುವುದೇ ಗೋಜಲಾಗಿದೆ. ಈ ಹಿನ್ನಲೆಯಲ್ಲಿ ಏಕದಿನ ಸರಣಿಯೇ ರದ್ದಾಗುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಸುಪ್ರೀಂ ಕೋರ್ಟ್ ಉನ್ನತ ಆಡಳಿತಾಧಿಕಾರಿಗಳನ್ನು ಜನವರಿ 19 ರೊಳಗಾಗಿ ನೇಮಿಸಲು ಸೂಚಿಸಿದೆ. ಆದರೆ ಇಂಗ್ಲೆಂಡ್ ಸರಣಿ ಜನವರಿ 15 ರಿಂದ ಪ್ರಾರಂಭವಾಗಬೇಕು. ಜನವರಿ 10 ರಿಂದ ಭಾರತ ಎ ತಂಡ ಪ್ರವಾಸಿಗರ ವಿರುದ್ಧ ಅಭ್ಯಾಸ ಪಂದ್ಯ ನಡೆಸುವುದೆಂದು ನಿಗದಿಯಾಗಿತ್ತು. ಇದೀಗ ಎಲ್ಲವೂ ಗೊಂದಲದಲ್ಲಿಯೇ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ