ಭಾರತ-ಇಂಗ್ಲೆಂಡ್ ಟಿ20 ಸರಣಿ ಇಂದಿನಿಂದ ಶುರು: ರೋಹಿತ್ ನಾಯಕತ್ವ
ಈ ಸರಣಿಗೆ ಖಾಯಂ ನಾಯಕ ರೋಹಿತ್ ಶರ್ಮಾ ಕಮ್ ಬ್ಯಾಕ್ ಮಾಡುತ್ತಿರುವುದು ವಿಶೇಷ. ಐಪಿಎಲ್ ಬಳಿಕ ರೋಹಿತ್ ಕ್ರಿಕೆಟ್ ಆಡಿಲ್ಲ. ಈಗಷ್ಟೇ ಕೊರೋನಾದಿಂದ ಚೇತರಿಸಿಕೊಂಡ ರೋಹಿತ್ ಈಗ ರಾಷ್ಟ್ರೀಯ ತಂಡದ ಹೊಣೆಗಾರಿಕೆ ಹೊತ್ತುಕೊಳ್ಳಲಿದ್ದಾರೆ.
ಈ ಪಂದ್ಯಕ್ಕೆ ವಿರಾಟ್ ಕೊಹ್ಲಿ, ರಿಷಬ್ ಪಂತ್ ಮುಂತಾದ ದಿಗ್ಗಜ ಆಟಗಾರರಿಲ್ಲ. ಬದಲಾಗಿ ಐರ್ಲೆಂಡ್ ನಲ್ಲಿ ಸರಣಿ ಗೆದ್ದ ಪ್ರತಿಭಾವಂತ ಯುವ ಪಡೆ ಕಣಕ್ಕಿಳಿಯಲಿದೆ. ರೋಹಿತ್ ಗೆ ಸಾಥ್ ನೀಡಲು ಅನುಭವಿಗಳಾದ ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ಇರಲಿದ್ದಾರೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10.30 ಕ್ಕೆ ಆರಂಭವಾಗಲಿದೆ.