ಭಾರತ-ಇಂಗ್ಲೆಂಡ್ ಟೆಸ್ಟ್: ಕೆಟ್ಟ ದಿನ, ಬೇಡದ ದಾಖಲೆಗಳು

ಗುರುವಾರ, 26 ಆಗಸ್ಟ್ 2021 (08:45 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 78 ರನ್ ಗೆ ಆಲೌಟ್ ಆಗುವ ಮೂಲಕ ಬೇಡದ ದಾಖಲೆಗಳನ್ನು ಮೈಮೇಲೆಳದುಕೊಂಡಿತು.


ಇನ್ನು, ಬೌಲಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಇಂಗ್ಲೆಂಡ್ ನಲ್ಲಿ ಬಳಿಕ ಬೊಂಬಾಟ್ ಬ್ಯಾಟಿಂಗ್ ನಡೆಸಿದ್ದು, ನಿನ್ನೆ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 120 ರನ್ ಗಳಿಸಿದೆ. ಇದರೊಂದಿಗೆ 42 ರನ್ ಗಳ ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಅತ್ಯಂತ ಕೆಟ್ಟ ಬ್ಯಾಟಿಂಗ್ ನಡೆಸಿತು. ರೋಹಿತ್ ಶರ್ಮಾ 19, ಅಜಿಂಕ್ಯಾ ರೆಹಾನೆ 18 ರನ್ ಗಳಿಸಿದ್ದು ಬಿಟ್ಟರೆ ಉಳಿದವರೆಲ್ಲರೂ ಏಕಂಕಿಯ ಸರದಾರರು. ಇದರೊಂದಿಗೆ ಭಾರತ 14 ವರ್ಷಗಳ ಬಳಿಕ ಮೊದಲ ದಿನವೇ ಎದುರಾಳಿಗೆ ಇನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟ ಕುಖ್ಯಾತಿಗೆ ಗುರಿಯಾಯಿತು.ಇನ್ನು, ಇಂಗ್ಲೆಂಡ್ ಮೊದಲ ದಿನವೇ ವಿಕೆಟ್ ನಷ್ಟವಿಲ್ಲದೇ ಇನಿಂಗ್ಸ್ ಮುನ್ನಡೆ ಗಳಿಸಿದ ಖ್ಯಾತಿ ಪಡೆಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ