147 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿ ಭಾರತ

ಗುರುವಾರ, 26 ಮಾರ್ಚ್ 2015 (15:24 IST)
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೃಹತ್ ಮೊತ್ತವಾದ 328 ರನ್ ಬೆನ್ನಟ್ಟಿದ ಭಾರತ  29 ಓವರುಗಳಲ್ಲಿ 147  ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದ ಸ್ಥಿತಿಯಲ್ಲಿದೆ. ಆರಂಭದಲ್ಲಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ವೇಗದಲ್ಲಿ ರನ್ ಕಲೆಹಾಕಿದರು. ಶಿಖರ್ ಧವನ್ ಭಾರತದ ಸ್ಕೋರ್ 76 ರನ್‌ಗಳಾಗಿದ್ದಾಗ ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ಮ್ಯಾಕ್ಸ್‌ವೆಲ್‌ಗೆ ಕ್ಯಾಚಿತ್ತು ಔಟಾದರು.

ನಂತರ ಆಡಲಿಳಿದ ವಿರಾಟ್ ಕೊಹ್ಲಿ ಸ್ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲದೇ ಜಾನ್ಸನ್ ಎಸೆತಕ್ಕೆ ಹ್ಯಾಡಿನ್‌ಗೆ ಕ್ಯಾಚಿತ್ತು ಔಟಾದರು.  ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ ಕೂಡ ಜಾನ್ಸನ್ ಬೌಲಿಂಗ್‌ನಲ್ಲಿ ಒಂದು ಸಿಕ್ಸರ್ ಬಾರಿಸಿದರಾದರೂ ನಂತರದ ಎಸೆತದಲ್ಲಿ  ಕ್ಲೀನ್ ಬೌಲ್ಡ್ ಆದರು. ರೋಹಿತ್ 34 ರನ್ ಸ್ಕೋರಿನಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿಯಿತ್ತು.

 ಸುರೇಶ್ ರೈನಾ ಫಾಲ್ಕನರ್ ಬೌಲಿಂಗ್‌ನಲ್ಲಿ ಒಂದು ಬೌಂಡರಿ ಹೊಡೆದು ನಂತರದ ಬೌನ್ಸ್ ಎಸೆತದಲ್ಲಿ ಚೆಂಡು ಬ್ಯಾಟಿಗೆ ತಾಗಿ ವಿಕೆಟ್‌ಕೀಪರ್ ಕೈಸೇರಿದ್ದರಿಂದ 7 ರನ್‌ಗಳಿಗೆ  ಔಟಾದರು.  329 ರನ್ ಗುರಿ ಬೆನ್ನತ್ತಿರುವ ಭಾರತ ತಂಡಕ್ಕೆ ಈಗ ಅಗ್ನಿಪರೀಕ್ಷೆ ಎದುರಾಗಿದ್ದು, ಧೋನಿ ಮತ್ತು ರಹಾನೆ ಉತ್ತಮ ಜೊತೆಯಾಟದ ಮೂಲಕ ಭಾರತ ತಂಡಕ್ಕೆ ಆಸರೆ ನೀಡಬೇಕಾಗಿದೆ. ಭಾರತ 4 ವಿಕೆಟ್ ಕಳೆದುಕೊಂಡು 143  ರನ್ ಗಳಿಸಿದ್ದು, ತೀವ್ರ ಸಂಕಷ್ಟದ ಸನ್ನಿವೇಶ ಎದುರಿಸುತ್ತಿದೆ.

ಧೋನಿ ಅಜೇಯ 24 ರನ್ ಮತ್ತು ರಹಾನೆ ಅಜೇಯ 27 ರನ್‌ಗಳೊಂದಿಗೆ ಬ್ಯಾಟಿಂಗ್ ಆಡುತ್ತಿದ್ದು, ಟೀಂ ಇಂಡಿಯಾ ಗೆಲುವಿಗೆ  ಉತ್ತಮ ಜೊತೆಯಾಟವಾಡಿ ಬೃಹತ್ ಮೊತ್ತವನ್ನು ಕಲೆಹಾಕುವ ಜವಾಬ್ದಾರಿ ಇವರ ಹೆಗಲ ಮೇಲೆ ಬಿದ್ದಿದೆ. 

ವೆಬ್ದುನಿಯಾವನ್ನು ಓದಿ