ಜಿಂಬಾಬ್ವೆ ವಿರುದ್ಧ ಸಂಕಷ್ಟದ ಸ್ಥಿತಿಯಲ್ಲಿ ಭಾರತ: 5 ವಿಕೆಟ್‌ಗೆ 165 ರನ್

ಶುಕ್ರವಾರ, 10 ಜುಲೈ 2015 (15:12 IST)
ಭಾರತ ಮತ್ತು ಜಿಂಬಾಬ್ವೆ ನಡುವೆ ಮೊದಲ ಏಕದಿನ ಪಂದ್ಯದಲ್ಲಿ 165 ರನ್‌ಗೆ 5 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟದ ಸ್ಥಿತಿಯಲ್ಲಿದೆ. ಭಾರತ ಈಗಾಗಲೇ 34 ಓವರುಗಳನ್ನು ಆಡಿದ್ದು ರನ್ ಸರಾಸರಿ ಕೂಡ ಕಡಿಮೆಯಿದೆ. ಆರಂಭದಲ್ಲಿ ಭಾರತ ಮುರಳಿ ವಿಜಯ್ ಅವರ ವಿಕೆಟ್ ಕಳೆದುಕೊಂಡ ಬಳಿಕ ರಹಾನೆ ಮತ್ತು ರಾಯುಡು ಅರ್ಧಶತಕದ ಜೊತೆಯಾಟವಾಡಿದರು.

ರೆಹಾನೆ 34 ರನ್ ಬಾರಿಸಿ ಔಟಾದ ಬಳಿಕ ಮನೋಜ್ ತಿವಾರಿ ಕೂಡ ಚಿಬಾಬಾ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯುಗೆ ಬಲಿಯಾದರು.  ರಾಬಿನ್ ಉತ್ತಪ್ಪಾ ಕೂಡ ಎ.ರಾಜಾಗೆ ರನ್ ಔಟ್ ಆಗಿದ್ದರಿಂದ ಭಾರತವೀಗ 35.2 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 165ರನ್ ಗಳಿಸಿದ್ದು ಶೋಚನೀಯ ಸ್ಥಿತಿಯಲ್ಲಿದೆ.

ಸ್ಟುವರ್ಟ್ ಬಿನ್ನಿ ವೇಗದಲ್ಲಿ ರನ್ ಸ್ಕೋರ್ ಮಾಡುತ್ತಿದ್ದು, 31 ಎಸೆತಗಳಲ್ಲಿ 21 ರನ್ ಮಾಡಿದ್ದಾರೆ. ಅಂಬಾಟಿ ರಾಯುಡು ಮತ್ತು ಸ್ಟುವರ್ಟ್ ಬಿನ್ನಿ ಉತ್ತಮ ಜೊತೆಯಾಟ ಆಡುತ್ತಿದ್ದು, ಅವರಿಬ್ಬರೂ ಸೇರಿ 75 ರನ್ ಸ್ಕೋರ್ ಮಾಡಿದ್ದಾರೆ. ಅಂಬಾಟಿ ರಾಯುಡು 82 ರನ್ ಸ್ಕೋರ್ ಮಾಡಿ ಅಜೇಯರಾಗಿ ಉಳಿದಿದ್ದಾರೆ.    ಭಾರತ ತಂಡದಲ್ಲಿ ಧೋನಿ, ಕೊಹ್ಲಿ, ರೈನಾ ಮತ್ತು ಅಶ್ವಿನ್ ಮುಂತಾದ ಅಗ್ರಮಾನ್ಯ ಆಟಗಾರರು ಆಡುತ್ತಿಲ್ಲ. ಚಮು ಚಿಬಾಬಾ 10 ಓವರುಗಳಲ್ಲಿ 25 ರನ್ ನೀಡಿ 2 ವಿಕೆಟ್ ಕಬಳಿಸಿದ್ದಾರೆ. ವಿಟೋರಿ ಮತ್ತು ತಿರಿಪಾನೊ ತಲಾ ಒಂದು ವಿಕೆಟ್ ಪಡೆದರು. 

ವೆಬ್ದುನಿಯಾವನ್ನು ಓದಿ