ಟಿ 20 ಸರಣಿ ಸೋಲಿನ ಭೀತಿಯಲ್ಲಿ ಭಾರತ: ಕೇವಲ 92 ರನ್‌ಗೆ ಆಲೌಟ್

ಸೋಮವಾರ, 5 ಅಕ್ಟೋಬರ್ 2015 (21:15 IST)
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಎರಡನೇ ಟಿ 20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬೌಲರುಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ಕೇವಲ 92 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸರಣಿ ಸೋಲಿನ ಭೀತಿಯನ್ನು ಎದುರಿಸುತ್ತಿದೆ.  ಕಟಕ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತದ ಪರ ರೋಹಿತ್ ಶರ್ಮಾ ಮತ್ತು ಸುರೇಶ್ ರೈನಾ ಅವರನ್ನು ಬಿಟ್ಟರೆ ಯಾರೊಬ್ಬರೂ 20 ರ ಗಡಿಯನ್ನು ದಾಟಲಿಲ್ಲ.

ಕೇವಲ 20 ಓವರುಗಳನ್ನು ಪೂರೈಸಲು ಕೂಡ ಭಾರತ ವಿಫಲವಾಗಿ 17. 2 ಓವರುಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದೆ.  ಮಾರ್ಕೆಲ್ ಅವರು 3 ವಿಕೆಟ್ ಕಬಳಿಸುವ ಮೂಲಕ ಶ್ರೇಷ್ಟ ಬೌಲರ್ ಎನಿಸಿದರು.

ಇಮ್ರಾನ್ ತಾಹಿರ್ ಮತ್ತು ಕ್ರಿಸ್ ಮೋರಿಸ್ ತಲಾ 2 ವಿಕೆಟ್ ಕಬಳಿಸಿದರು.  ರಾಬಡಾ ಅವರು ಒಂದು ವಿಕೆಟ್ ಗಳಿಸಿದರು. ಭಾರತದ 92 ರನ್‌ಗಳಿಗೆ ಪ್ರತಿಯಾಗಿ ದಕ್ಷಿಣ ಆಫ್ರಿಕಾ 38 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. 

ವೆಬ್ದುನಿಯಾವನ್ನು ಓದಿ