ವೆಸ್ಟ್ ಇಂಡೀಸ್‌ನಲ್ಲಿ ಭಾರತ: ಪ್ರೆಸಿಡೆಂಟ್ಸ್ ಇಲೆವನ್‌ಗೆ ಲಿಯೋನ್ ಜಾನ್ಸನ್ ಸಾರಥ್ಯ

ಬುಧವಾರ, 6 ಜುಲೈ 2016 (12:17 IST)
ಗಯಾನಾದ ಎಡಗೈ ಆಟಗಾರ ಲಿಯೊನ್ ಜಾನ್ಸನ್ ಅವರು ಪ್ರವಾಸಿ ಭಾರತ ತಂಡದ ವಿರುದ್ಧ  2 ದಿನಗಳ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಪ್ರೆಸಿಡೆಂಟ್ಸ್ ಇಲೆವನ್ ತಂಡವನ್ನು ಮುನ್ನಡೆಸಲಿದ್ದಾರೆ. ಸೇಂಟ್ ಕಿಟ್ಸ್ ವಾರ್ನರ್ ಪಾರ್ಕ್‌ನಲ್ಲಿ ಶನಿವಾರ ಪಂದ್ಯ ಆರಂಭವಾಗಲಿದೆ. ನಾಲ್ಕು ಟೆಸ್ಟ್‌ಗಳಲ್ಲಿ 275 ರನ್ ಸ್ಕೋರ್ ಮಾಡಿರುವ ಜಾನ್ಸನ್ ತಂಡದ 6 ಟೆಸ್ಟ್ ಆಟಗಾರರ ಪೈಕಿ ಒಬ್ಬರಾಗಿದ್ದಾರೆ. ಭಾರತ ಮೂರು ಅಭ್ಯಾಸ ಪಂದ್ಯಗಳನ್ನು ಆಡಲಿದ್ದು, ಮುಂದಿನದು ಜುಲೈ 14ರಿಂದ ಮೂರು ದಿನಗಳ ಪಂದ್ಯವಾಗಲಿದೆ.
 
 2014ರಲ್ಲಿ ಬಾಂಗ್ಲಾ ವಿರುದ್ಧ ಚೊಚ್ಚಲ ಟೆಸ್ಟ್ ಆಡಿದ ಜಾನ್ಸನ್ ಟೆಸ್ಟ್ ಮಾದರಿಯಲ್ಲಿ 39.28 ಸರಾಸರಿ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡವು ಜುಲೈ 21ರಿಂದ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಾಲ್ಕು ದಿನಗಳ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ.
 
 ಎರಡನೇ ಟೆಸ್ಟ್ ಪಂದ್ಯವನ್ನು ಜಮೈಕಾದ ಸಬೀನಾ ಪಾರ್ಕ್‌ನಲ್ಲಿ ಜುಲೈ 30ರಿಂದ ಆಡಲಾಗುತ್ತದೆ. ಮೂರನೇ ಟೆಸ್ಟ್ ಪಂದ್ಯವನ್ನು ಆಗಸ್ಟ್ 9ರಿಂದ ಗ್ರಾಸ್ ಐಲೆಟ್ ಡಾರೆನ್ ಸಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲಾಗುತ್ತದೆ. ನಾಲ್ಕನೇ ಮತ್ತು ಕೊನೆಯ ಪಂದ್ಯವನ್ನು ಆಗಸ್ಟ್ 18ರಿಂದ ಟ್ರಿನಿಡಾಡ್ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಸಲಾಗುತ್ತಿದೆ.

ಕಳೆದ 10 ವರ್ಷಗಳಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ 12 ಟೆಸ್ಟ್ ಪಂದ್ಯಗಳನ್ನು ಆಡಿದೆ. ಭಾರತ 6 ಪಂದ್ಯಗಳಲ್ಲಿ ಜಯಗಳಿಸಿದರೆ ವೆಸ್ಟ್ ಇಂಡೀಸ್ ಒಂದೂ ಜಯ ಗಳಿಸಿಲ್ಲ. ಭಾರತ 1-0ಯಿಂದ ಸರಣಿ ಗೆದ್ದುಕೊಂಡಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ