ಭಾರತ-ಶ್ರೀಲಂಕಾ ಪ್ರವಾಸ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

ಮಂಗಳವಾರ, 20 ಜೂನ್ 2017 (10:00 IST)
ಮುಂಬೈ:  ಚಾಂಪಿಯನ್ಸ್ ಟ್ರೋಫಿಯೊಂದಿಗೆ ಈ ಋತು ಆರಂಭಿಸಿರುವ ಟೀಂ ಇಂಡಿಯಾಗೆ ಬಿಡುವಿಲ್ಲದ ವೇಳಾಪಟ್ಟಿ ನಿಗದಿಯಾಗಿದೆ. ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಂತರ ಶ್ರಿಲಂಕಾ ಪ್ರವಾಸ ಮಾಡಲಿದೆ.

 
ವೆಸ್ಟ್ ಇಂಡೀಸ್ ವಿರುದ್ಧ 5 ಏಕದಿನ ಮತ್ತು 1 ಟಿ-20 ಪಂದ್ಯಗಳ ಸರಣಿ ಆಡಲಿರುವ ಭಾರತ ನಂತರ ನೇರವಾಗಿ ಲಂಕಾಗೆ ಪ್ರಯಾಣ ಬೆಳೆಸಲಿದೆ. ಜುಲೈ 21 ರಂದು ಅಭ್ಯಾಸ ಪಂದ್ಯದೊಂದಿಗೆ ಟೀಂ ಇಂಡಿಯಾದ ಲಂಕಾ ಪ್ರವಾಸ ಆರಂಭವಾಗಲಿದೆ.

ಜುಲೈ 26 ರಿಂದ 30 ರವರೆಗೆ ಕ್ಯಾಂಡಿಯಲ್ಲಿ ಮೊದಲ ಟೆಸ್ಟ್ ಪಂದ್ಯ ನಿಗದಿಯಾಗಿದೆ.  ಆಗಸ್ಟ್ 4-8 ರವರೆಗೆ ಗಾಲೆ ಮೈದಾನದಲ್ಲಿ ದ್ವಿತೀಯ ಟೆಸ್ಟ್ ಪಂದ್ಯ ನಡೆಯಲಿದೆ. ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಕೊಲೊಂಬೋದಲ್ಲಿ ಆಗಸ್ಟ್ 12 ರಿಂದ 16 ರವರೆಗೆ ನಡೆಯಲಿದೆ.

ಟೆಸ್ಟ್ ಸರಣಿ ಮುಗಿದ ಬಳಿಕ ಐದು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಇದು ಆಗಸ್ಟ್ 20, 24, 27,  30 ಮತ್ತು ಸೆಪ್ಟೆಂಬರ್ 3 ರಂದು  ನಡೆಯಲಿದೆ. ಈ ಪಂದ್ಯಗಳು ದಂಬುಲಾ, ಪಲ್ಲಕೆಲೆ ಹಾಗೂ ಕೊಲೊಂಬೋ ಮೈದಾನಗಳಲ್ಲಿ ನಡೆಯಲಿದೆ. ಇದಲ್ಲದೆ ಸೆಪ್ಟೆಂಬರ್ 6 ರಂದು ಏಕಮಾತ್ರ ಟಿ-20 ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ