65ಕ್ಕೆ 6 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿ ಭಾರತ

ಶನಿವಾರ, 15 ಆಗಸ್ಟ್ 2015 (11:30 IST)
ಶ್ರೀಲಂಕಾ ಮತ್ತು ಭಾರತದ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 6  ವಿಕೆಟ್ ಕಳೆದುಕೊಂಡು 65 ರನ್ ಗಳಿಸಿ ಶೋಚನೀಯ ಸ್ಥಿತಿಯಲ್ಲಿದೆ. ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ 367 ರನ್ ಸ್ಕೋರ್ ಮಾಡಿ ಭಾರತದ ಗೆಲುವಿಗೆ 176 ರನ್ ಗುರಿಯನ್ನು ಇರಿಸಿತ್ತು. ಆದರೆ ಭಾರತ  ಆರಂಭದಲ್ಲೇ ಲೋಕೇಶ್ ರಾಹುಲ್, ಇಶಾಂತ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದ ಸ್ಥಿತಿಗೆ ತಲುಪಿತು.

ಭಾರತದ 6ವಿಕೆಟ್‌ಗಳ ಪೈಕಿ2   ವಿಕೆಟ್‌ಗಳನ್ನು ಶ್ರೀಲಂಕಾ ಎಡಗೈ ಸ್ಪಿನ್ ಬೌಲರ್ ಹೆರಾತ್  ಎಲ್‌ಬಿಡಬ್ಲ್ಯು ಮೂಲಕ ತೆಗೆದರೆ, ರೋಹಿತ್ ಶರ್ಮಾ ಹೆರಾತ್‌ಗೆ ಬೌಲ್ಡ್ ಆಗಿದ್ದಾರೆ. ಹೇರಾತ್ 6 ವಿಕೆಟ್‌ಗಳ ಪೈಕಿ ಮೂರು ವಿಕೆಟ್ ಕಬಳಿಸಿದರು. ಭಾರತದ ಪರ ರಹಾನೆ ಇನ್ನೂ ಬ್ಯಾಟಿಂಗ್ ಆಡುತ್ತಿದ್ದು ಧವನ್ 28 ರನ್ ಸ್ಕೋರ್ ಮಾಡಿ ಕೌಶಲ್ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚಿತ್ತು ಔಟಾದರು.

ರಹಾನೆ 1 ಬೌಂಡರಿಯೊಂದಿಗೆ 7 ರನ್ ಸ್ಕೋರ್ ಮಾಡಿದ್ದಾರೆ. ಭಾರತದ ಗೆಲುವು ಈಗ ರಹಾನೆ  ಬ್ಯಾಟಿಂಗ್ ಮೇಲೆ ಅವಲಂಬಿಸಿದೆ. ಅವರು ಉತ್ತಮವಾಗಿ ಆಡಿ ಸ್ಕೋರ್ ಮುಂದಕ್ಕೆ ಒಯ್ದರೆ ಗೆಲುವು ಸಂಪಾದಿಸಬಹುದು. 

ವೆಬ್ದುನಿಯಾವನ್ನು ಓದಿ