ಶ್ರೀಲಂಕಾ ವಿರುದ್ಧ ಸೋಲಿನೊಂದಿಗೆ 8 ವರ್ಷಗಳ ದಾಖಲೆಗೆ ತಿಲಾಂಜಲಿ ಇಟ್ಟ ಭಾರತ
ಶುಕ್ರವಾರ, 9 ಜೂನ್ 2017 (10:28 IST)
ಅನಿರೀಕ್ಷಿತ ಫಲಿತಾಂಶಗಳಿಗೆ ಹೆಸರಾದ ಶ್ರೀಲಂಕಾ ತಂಡ ನಿನ್ನೆಯ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲೂ ಬರತಕ್ಕೆ ಸೋಲುಣಿಸುವ ಮೂಲಕ ಅನಿರೀಕ್ಷಿತ ಫಲಿತಾಂಶ ನೀಡಿದೆ. ಪಾಕಿಸ್ತಾನವನ್ನ ಸೋತು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಕೊಹ್ಲಿ ಪಡೆ ಈ ಸೋಲಿನೊಂದಿಗೆ 8 ವರ್ಷಗಳ ಚಾಂಪಿಯನ್ಸ್ ಟ್ರೋಫಿ ದಾಖಲೆಗೆ ತಿಲಾಂಜಲಿ ಹೇಳಿದೆ.
ಹೌದು, 2009ರಲ್ಲಿ ಪಾಕಿಸ್ತಾನ ವಿರುದ್ಧ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಆ ಬಳಿಕ ಸೋಲೇ ಕಂಡಿರಲಿಲ್ಲ. 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೋಲಿಲ್ಲದ ಸರದಾರನಾಗಿ ಟ್ರೋಫಿ ಗೆದ್ದಿತ್ತು. ಈ ಬಾರಿಯ ಭಾರತ ತಂಡ ಸಹ ಪ್ರಬಲವಾಗಿದ್ದು, ಅದೇ ದಾಖಲೆ ಮುಂದುವರೆಯುವ ನಿರೀಕ್ಷೆ ಹುಸಿಯಾಗಿದೆ.
322 ರನ್ ಗುರಿಯನ್ನ ನಿರಾಯಾಸವಾಗಿ ತಲುಪಿದ ಲಂಕಾ ಬ್ಯಾಟ್ಸ್`ಮನ್`ಗಳು ಯಾವುದೇ ಹಂತದಲ್ಲೂ ಭಾರತದ ಬೌಲರ್`ಗಳಿಗೆ ಕಮ್ ಬ್ಯಾಕ್ ಮಾಡುವ ಅವಕಾಶ ನೀಡಲಿಲ್ಲ. ಇತ್ತೀಚೆಗೆ ನಿರೀಕ್ಷೆ ಮೂಡಿಸಿದ್ದ ುಮೆಶ್ ಯಾದವ್ ಧಾರಾಳವಾಗಿ ರನ್ ಕೊಟ್ಟರು.