3ನೇ ಟೆಸ್ಟ್ : ಭಾರತ 4 ವಿಕೆಟ್ ಕಳೆದುಕೊಂಡು 115 ರನ್

ಬುಧವಾರ, 25 ನವೆಂಬರ್ 2015 (12:43 IST)
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಆಡುತ್ತಿರುವ ಭಾರತ ದಕ್ಷಿಣ ಆಫ್ರಿಕಾದ ಸ್ಪಿನ್ ಬೌಲರುಗಳ  ದಾಳಿಗೆ ತತ್ತರಿಸಿ ಮೂರು ವಿಕೆಟ್ ಕಳೆದುಕೊಂಡು 105 ರನ್ ಗಳಿಸಿದೆ.  13ನೇ ಓವರಿನ ಕಡೆಯ ಚೆಂಡಿನಲ್ಲಿ ಧವನ್ ಅವರು ಎಲ್ಗರ್ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚಿತ್ತು ಔಟಾದರು. 

 
ಎಲ್ಗರ್ ಬಲಭಾಗಕ್ಕೆ ಜಿಗಿದು ಕ್ಯಾಚ್ ಹಿಡಿದರು. ಭಾರತದ ಸ್ಕೋರು 69 ರನ್‌ಗಳಾಗಿದ್ದಾಗ ಮಾರ್ಕೆಲ್ ಬೌಲಿಂಗ್‌ನಲ್ಲಿ ವಿಜಯ್ ಎಲ್‌ಬಿಡಬ್ಲ್ಯುಗೆ ಬಲಿಯಾದರು.  30ನೇ ಓವರಿನಲ್ಲಿ ಪೂಜಾರಾ ಕೂಡ ಹಾರ್ಮರ್ ಸ್ಪಿನ್‌ ದಾಳಿಯನ್ನು ಆಡಲು ತಿಣುಕಾಡಿ ಪ್ಯಾಡ್‌ಗೆ ಚೆಂಡು ಬಡಿದು ಎಲ್‌ಬಿಡಬ್ಲ್ಯುಗೆ ಬಲಿಯಾದರು.

 ಭಾರತ 4  ವಿಕೆಟ್‌ ಕಳೆದುಕೊಂಡು  115 ರನ್ ಗಳಿಸಿದ್ದು, ವಿರಾಟ್ ಕೊಹ್ಲಿ 50 ಎಸೆತಗಳಲ್ಲಿ 20 ರನ್ ಮತ್ತು ರೆಹಾನೆ 13 ರನ್ ಮಾಡಿ ಮಾರ್ಕೆಲ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿದ್ದಾರೆ. 

ವೆಬ್ದುನಿಯಾವನ್ನು ಓದಿ