ಏಷ್ಯಾ ಕಪ್ ನಲ್ಲಿ ಇನ್ನೊಂದು ಬಾರಿ ಭಾರತ-ಪಾಕ್ ನಡುವೆ ಪಂದ್ಯ

ಗುರುವಾರ, 1 ಸೆಪ್ಟಂಬರ್ 2022 (08:40 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ನ ಮೊದಲ ಲೀಗ್ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ನಡುವೆ ರೋಚಕ ಪಂದ್ಯ ನಡೆದು ಕೊನೆಗೆ ಟೀಂ ಇಂಡಿಯಾ ಗೆಲುವು ಕಂಡಿತು.

ಭಾರತ-ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಸಹಜವಾಗಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುತ್ತದೆ. ಈ ಕಾತುರದ ಪಂದ್ಯಗಳು ಇದೇ ಏಷ್ಯಾ ಕಪ್ ನಲ್ಲಿ ಇನ್ನೂ ಒಂದು ಬಾರಿ ನಡೆಯಲಿದೆ.

ಸೂಪರ್ ಫೋರ್ ಹಂತದಲ್ಲಿ ಭಾರತ ಮತ್ತು ಪಾಕ್ ತಂಡಗಳು ಗೆಲುವು ಸಾಧಿಸಿ ಫೈನಲ್ ಗೇರುವುದು ಬಹುತೇಕ ಖಚಿತ. ಸದ್ಯಕ್ಕೆ ಏಷ್ಯಾ ಕಪ್ ನಲ್ಲಿ ಬಲಿಷ್ಠ ತಂಡಗಳೆಂದರೆ ಭಾರತ-ಪಾಕ್ ತಂಡಗಳು. ಈ ಎರಡು ತಂಡಗಳು ಫೈನಲ್ ಗೆ ಬಂದರೆ ಮತ್ತೆ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಜಿದ್ದಾ ಜಿದ್ದಿನ ಹೋರಾಟಕ್ಕೆ ವೇದಿಕೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ