ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ ಇಂದಿನಿಂದ ಆರಂಭ
ಇಂದಿನಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗುತ್ತಿದ್ದು ಮೊದಲ ಪಂದ್ಯ ಹೈದರಾಬಾದ್ ಮೈದಾನದಲ್ಲಿ ನಡೆಯಲಿದೆ. ಟೀಂ ಇಂಡಿಯಾ ಈಗ ಪ್ರಚಂಡ ಫಾರ್ಮ್ ನಲ್ಲಿದೆ. ವಿರಾಟ್ ಕೊಹ್ಲಿ, ಶುಬ್ನಂ ಗಿಲ್, ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಬೌಲಿಂಗ್ ನಲ್ಲೂ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಒಳಗೊಂಡ ಪ್ರತಿಭಾವಂತರು ಎದುರಾಳಿಗಳನ್ನು ಕಟ್ಟಿ ಹಾಕಬಲ್ಲ ಸಮರ್ಥರು.
ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾ ಅತ್ಯುತ್ತಮ ತಂಡವನ್ನು ತಯಾರು ಮಾಡುವುದು ಮುಖ್ಯವಾಗಿದೆ. ಹೀಗಾಗಿ ಈ ಏಕದಿನ ಸರಣಿಗಳು ಮುಂಬರುವ ವಿಶ್ವಕಪ್ ಗೆ ತಯಾರಾಗಲು ಉತ್ತಮ ವೇದಿಕೆಯಾಗಲಿದೆ. ಈ ಪಂದ್ಯ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.