ಸಹ ಕ್ರಿಕೆಟಿಗನ ಗೆಳತಿ ಜೊತೆ ಪಾಕ್ ನಾಯಕ ಬಾಬರ್ ಅಜಮ್ ಅಶ್ಲೀಲ ಚ್ಯಾಟ್, ವಿಡಿಯೋ ಬಹಿರಂಗ

ಮಂಗಳವಾರ, 17 ಜನವರಿ 2023 (09:00 IST)
WD
ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ತಂಡದ ಸಹ ಕ್ರಿಕೆಟಿಗನ ಗೆಳತಿ ಎನ್ನಲಾದ ಯುವತಿ ಜೊತೆ ನಡೆಸಿದ ಅಶ್ಲೀಲ ಚ್ಯಾಟ್, ವಿಡಿಯೋ ಈಗ ವೈರಲ್ ಆಗಿದೆ. ಈ ವಿಚಾರ ಈಗ ಭಾರೀ ಗುಲ್ಲೆಬ್ಬಿಸಿದೆ.

ಯುವತಿ ಜೊತೆ ಸೆಕ್ಸ್ಟಿಂಗ್ ಚ್ಯಾಟ್, ವಿಡಿಯೋ ನಡೆಸಿರುವ ವಿಚಾರಗಳು ಈಗ ಟ್ವಿಟರ್ ನಲ್ಲಿ ಹರಿದಾಡುತ್ತಿದೆ. ಈ ಸಂದೇಶಗಳಲ್ಲಿ ಯುವತಿಗೆ ಬಾಬರ್ ಅಜಮ್, ನೀನು ಇದೇ ರೀತಿ ಸಹಕರಿಸಿದರೆ ನಿನ್ನ ಗೆಳೆಯನಿಗೆ ತಂಡದಿಂದ ಕಿತ್ತು ಹಾಕಲ್ಲ ಎಂದು ಭರವಸೆ ನೀಡುತ್ತಾರೆ.

ಬಾಬರ್ ಅಜಮ್ ಈ ಸಂದೇಶಗಳು ವೈರಲ್ ಆಗುತ್ತಿದ್ದಂತೇ, ಕೆಲವರು ಇದು ಹನಿಟ್ರ್ಯಾಪ್. ಬೇಕೆಂದೇ ಬಾಬರ್ ಅಜಮ್ ರನ್ನು ಸಿಲುಕಿಸಲಾಗಿದೆ. ಇದು ಅವರ ಇಮೇಜ್ ಗೆ ಧಕ್ಕೆ ತರಲು ಮಾಡಿದ ಪ್ರಯತ್ನ ಎಂದು ಸಮರ್ಥಿಸಿಕೊಂಡಿದ್ದಾರೆ. ಇನ್ನು ಕೆಲವರು ಬಾಬರ್ ರನ್ನು ಕೂಡಲೇ ತಂಡದಿಂದ ಕಿತ್ತು ಹಾಕಬೇಕೆಂದು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ