ಫೆಬ್ರವರಿ 27ರಂದು ಭಾರತ- ಪಾಕಿಸ್ತಾನ ನಡುವೆ ಸ್ಫೋಟಕ ಪಂದ್ಯ

ಗುರುವಾರ, 28 ಜನವರಿ 2016 (17:36 IST)
ಭಾರತ ಮತ್ತು ಪಾಕಿಸ್ತಾನದ ನಡುವೆ ಸ್ಫೋಟಕ ಪಂದ್ಯವನ್ನು ಮಿರ್‌ಪುರದಲ್ಲಿ ಫೆ. 27ರಂದು  ಆಡಲಾಗುತ್ತದೆ.  2015ರ ಐಸಿಸಿ ವಿಶ್ವಕಪ್ ಬಳಿಕ ಸಾಂಪ್ರದಾಯಿಕ ವೈರಿಗಳು ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಮಾರ್ಚ್-  ಏಪ್ರಿಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನಕ್ಕೆ  ಐಸಿಸಿ ವಿಶ್ವ ಟ್ವೆಂಟಿ 20ಗೆ ಸಿದ್ಧತೆ ಮಾಡಿಕೊಳ್ಳಲು ಇದೊಂದು ಉತ್ತಮ ಅವಕಾಶ ಸಿಕ್ಕಿದೆ.
 
 ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯವನ್ನು ನೋಡುವುದು ಉಭಯ ರಾಷ್ಟ್ರಗಳ ಅಭಿಮಾನಿಗಳಿಗೆ ಪುಳಕಗೊಳಿಸುತ್ತದೆ. ರಾಜಕೀಯ ಕಾರಣಗಳಿಂದ ಕಡು ವೈರಿಗಳ ನಡುವೆ ದ್ವಿಪಕ್ಷೀಯ ಸರಣಿ ರದ್ದು ಮಾಡಲಾಗಿತ್ತು. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳು ತಟಸ್ಥ ಶ್ರೀಲಂಕಾದಲ್ಲಿ ಕಿರುಓವರುಗಳ ಸರಣಿಯನ್ನು ಆಡಲು ಒಪ್ಪಿದ್ದರೂ ಭಾರತ ಸರ್ಕಾರ ಅದಕ್ಕೆ ಸಮ್ಮತಿಸಿರಲಿಲ್ಲ.
 
ಶ್ರೀಲಂಕಾ ಏಷ್ಯಾ ಕಪ್‌ನಲ್ಲಿ ಹಾಲಿ ಚಾಂಪಿಯನ್ನರಾಗಿದ್ದು, ಫೆಬ್ರವರಿ 25ರಂದು ಅಭಿಯಾನ ಆರಂಭಿಸಲಿದೆ. ಐದು ಬಾರಿ ಏಷ್ಯಾ ಕಪ್ ಚಾಂಪಿಯನ್ನರಾದ ಲಂಕಾ ಅರ್ಹತಾ ಸುತ್ತಿನ ವಿಜೇತರ ಜತೆ ಆಡಲಿದೆ.  ಏಷ್ಯಾ ಕಪ್ ವೇಳಾಪಟ್ಟಿ ಫೆ.  24 ಭಾರತ ವಿರುದ್ಧ ಬಾಂಗ್ಲಾದೇಶ, ಫೆ. 27 ಭಾರತ ವಿರುದ್ಧ ಪಾಕಿಸ್ತಾನ, ಮಾರ್ಚ್ ಒಂದು ಭಾರತ ವಿರುದ್ಧ ಶ್ರೀಲಂಕಾ, ಮಾರ್ಚ್ 3 ಭಾರತ ವಿರುದ್ಧ ಟಿಬಿಡಿ.
 
 

ವೆಬ್ದುನಿಯಾವನ್ನು ಓದಿ