2017ರ ಫೈನಲ್‌ನ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುತ್ತಾ ಭಾರತ: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಬಲಾಬಲ ಹೇಗಿದೆ

Sampriya

ಭಾನುವಾರ, 23 ಫೆಬ್ರವರಿ 2025 (10:10 IST)
Photo Courtesy X
ದುಬೈ: 2017ರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದ ತಂಡವನ್ನು ಮಣಿಸಿ ಪಾಕಿಸ್ತಾನ ತಂಡವು ಮೊದಲ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.

ಬರೋಬ್ಬರಿ ಎಂಟು ವರ್ಷಗಳ ನಂತರ ಈ ಹಿಂದಿನ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಅವಕಾಶ ಭಾರತಕ್ಕೆ ಲಭಿಸಿದೆ. ಚಾಂಪಿಯನ್ಸ್‌ ಟ್ರೋಫಿಯ ಪಂದ್ಯದಲ್ಲಿ ಇಂದು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಪಾಕಿಸ್ತಾನ ತಂಡವನ್ನು ದುಬೈನಲ್ಲಿ ಎದುರಿಸುತ್ತಿದೆ.

ಮೊಹಮ್ಮದ್‌ ರಿಜ್ವಾನ್‌ ನಾಯಕತ್ವದ ಪಾಕ್‌ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈಗಾಗಲೇ ನ್ಯೂಜಿಲೆಂಡ್ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಸೋತಿರುವ ಪಾಕ್‌ ತಂಡವು ಭಾರತದ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಿದೆ. ಭಾರತ ತಂಡವು ಈಗಾಗಲೇ ಬಾಂಗ್ಲಾದೇಶವನ್ನು ಮಣಿಸಿ, ಆತ್ಮವಿಶ್ವಾಸದಲ್ಲಿದೆ.

ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕ್‌ ತಂಡಗಳು ಈತನಕ ಎಂದು ಬಾರಿ ಮುಖಾಮುಖಿಯಾಗಿದ್ದು, ಎಲ್ಲಾ ಸಂದರ್ಭದಲ್ಲೂ ಭಾರತವೇ ಗೆದ್ದಿದೆ. ಆದರೆ, ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾರತಕ್ಕಿಂತ ಪಾಕ್‌ನ ಸಾಧನೆ ಉತ್ತಮವಾಗಿದೆ. ಐದು ಮುಖಾಮುಖಿಗಳಲ್ಲಿ ಮೂರು ಬಾರಿ  ಪಾಕ್‌ ಗೆದ್ದಿದ್ದರೆ, ಭಾರತ ಎರಡು ಬಾರಿ ಮಾತ್ರ ಜಯಿಸಿದೆ. ಭಾರತ ತಂಡವು ಎರಡು ಬಾರಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದರೆ, ಪಾಕ್‌ ಒಮ್ಮೆ ಜಯಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ