ICC Champions Trophy : ಭಾರತಕ್ಕೆ ಸವಾಲಿನ ಗುರಿ ನೀಡಿದ ಬಾಂಗ್ಲಾದೇಶ

Sampriya

ಗುರುವಾರ, 20 ಫೆಬ್ರವರಿ 2025 (18:32 IST)
Photo Courtesy X
ದುಬೈ: ಆರಂಭಿಕ ಕುಸಿತದಿಂದ ಚೇತರಿಸಿಕೊಂಡ ಬಾಂಗ್ಲಾದೇಶ ತಂಡವು ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಭಾರತದ ವಿರುದ್ಧ ಸವಾಲಿನ ಮೊತ್ತ ಕಲೆ ಹಾಕಿದೆ.

35 ರನ್‌ಗಳಿಗೆ ಐದು ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ತೌಹಿದ್ ಹೃದಯೋಯ್ (100 ರನ್‌) ಶತಕ ಸಿಡಿಸುವ ಮೂಲಕ ಆಸರೆಯಾದರು. ಅವರಿಗೆ ಜೇಕರ್ ಅಲಿ (68 ರನ್‌ ಸಾಥ್‌ ನೀಡಿದರು.

ಬಾಂಗ್ಲಾದೇಶ ತಂಡವು 49.4 ಓವರ್‌ಗಳಿಗೆ 228 ರನ್‌ ಗಳಿಸಿ ಆಲೌಟ್‌ ಆಯಿತು. ಈ ಮೂಲಕ ಭಾರತದ ಗೆಲುವಿಗೆ 229 ರನ್‌ಗಳ ಗುರಿ ನೀಡಿದೆ.

ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಟಾಸ್‌ ಗೆದ್ದ ಬಾಂಗ್ಲಾದೇಶ ತಂಡ ಬ್ಯಾಟಿಂಗ್‌ ಆಯ್ದುಕೊಂಡಿತು. ಭಾರತದ ಮೊಹಮ್ಮದ್‌ ಶಮಿ, ಹರ್ಷಿತ್‌ ರಾಣಾ ಆರಂಭದಲ್ಲೇ ಪೆಟ್ಟು ನೀಡಿದರು.

ಮೊಹಮ್ಮದ್‌ ಶಮಿ ಒಟ್ಟು ನಾಲ್ಕು ವಿಕೆಟ್‌ ಮಿಂಚಿದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 201 ವಿಕೆಟ್‌ ಪಡೆದರು. ಹರ್ಷಿತ್‌ ರಾಣಾ ಮೂರು ಮತ್ತು ಅಕ್ಷರ್‌ ಪಟೇಲ್‌ ಎರಡು ವಿಕೆಟ್‌ ಪಡೆದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ