ಭಾರತ-ದ.ಆಫ್ರಿಕಾ ಟಿ20 ಇಂದಿನಿಂದ
ಮೊದಲ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಕೊಹ್ಲಿ, ರೋಹಿತ್ ಮುಂತಾದ ಅನುಭವಿಗಳಿಲ್ಲದೇ ಹೋದರೂ ಇತ್ತೀಚೆಗೆ ನಡೆದ ಐಪಿಎಲ್ ನಲ್ಲಿ ಮಿಂಚಿದ್ದ ಯುವ ಹಾಗೂ ಪ್ರತಿಭಾವಂತರ ಪಡೆಯಿದೆ.
ದಿನೇಶ್ ಕಾರ್ತಿಕ್ ಬಹಳ ಸಮಯದ ನಂತರ ಟೀಂ ಇಂಡಿಯಾಗೆ ಮರಳಿದ್ದು, ಆಡುವ ಬಳಗದಲ್ಲಿ ಅವಕಾಶ ಸಿಗುವ ಸಾಧ‍್ಯತೆಯಿದೆ. ಅಂತೆಯೇ ಹಾರ್ದಿಕ್ ಪಾಂಡ್ಯ ಐಪಿಎಲ್ ಸಕ್ಸಸ್ ನಂತರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ರಿಷಬ್ ಪಂತ್ ನಾಯಕನಾಗಿ ಬಡ್ತಿ ಪಡೆದಿದ್ದು ಟಿ20 ಕ್ರಿಕೆಟ್ ನಲ್ಲಿ ಅವರು ಉತ್ತಮ ಆಟವಾಡುತ್ತಾರೆ. ತವರಿನಲ್ಲಿ ಭಾರತ ಎಂದಿಗೂ ಕಠಿಣ ಎದುರಾಳಿಯೇ. ಹೀಗಾಗಿ ಆಫ್ರಿಕಾ ತಂಡಕ್ಕೆ ಕಠಿಣ ಸವಾಲೊಡ್ಡುವುದು ಖಚಿತ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.