ಭಾರತ-ದ.ಆಫ್ರಿಕಾ ಮೂರನೇ ಟಿ20 ಇಂದು
ಈಗಾಗಲೇ ಭಾರತ ಸರಣಿ ಗೆದ್ದಿರುವುದರಿಂದ ಇಂದಿನ ಪಂದ್ಯ ಔಪಚಾರಿಕವಾಗಲಿದೆ. ಮುಂದಿನ ವಿಶ್ವಕಪ್ ದೃಷ್ಟಿಯಿಂದ ಭಾರತ ತಂಡ ಇಂದಿನ ಪಂದ್ಯವನ್ನು ಪ್ರಯೋಗಕ್ಕೆ ವೇದಿಕೆಯಾಗಿ ಬಳಸಬಹುದು.
ಕಳೆದ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿಯೂ ಬೌಲರ್ ಗಳು ಅದನ್ನು ನಿಯಂತ್ರಿಸಲು ತಿಣುಕಾಡಿದ್ದರು. ಹೀಗಾಗಿ ಭಾರತ ಟಿ20 ವಿಶ್ವಕಪ್ ಗೆ ಮುನ್ನ ಈ ಹುಳುಕುಗಳನ್ನು ಸರಿಪಡಿಸಬೇಕಿದೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.