ಹೈದ್ರಾಬಾದ್ ಟೆಸ್ಟ್: ಭಾರತದ ಗೆಲುವಿಗೆ ಬೇಕು 7 ವಿಕೆಟ್

ಭಾನುವಾರ, 12 ಫೆಬ್ರವರಿ 2017 (20:06 IST)
ಹೈದ್ರಾಬಾದ್`ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. 4ನೇ ದಿನದಾಟದಂತ್ಯಕ್ಕೆ 2ನೇ ಇನ್ನಿಂಗ್ಸ್`ನಲ್ಲಿ ಬಾಂಗ್ಲಾದೇಶ 103 ರನ್`ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದು, 356 ರನ್`ಗಳ ಹಿನ್ನಡೆಯಲ್ಲಿದೆ. ನಾಳೆ ಪಂದ್ಯದ ಕೊನೆಯ ದಿನವಾಗಿದ್ದು, ಬಾಂಗ್ಲಾ ಸೋಲಿನ ಸುಳಿಯಿಂದ ತಪ್ಪಿಸಿಕೊಳ್ಳಲು ಹರಸಾಹಸಪಡಬೇಕಾಗಿದೆ. ನಾಳೆ ಪಂದ್ಯದ ಕೊನೆಯ ದಿನವಾಗಿದ್ದು ಬ್ಯಾಟಿಂಗ್ ಸುಲಭವಲ್ಲ. ಭಾರತದ ಬೌಲರ್`ಗಳು ಮೆರೆದಾಡಿದರೆ ಗೆಲುವು ಕಟ್ಟಿಟ್ಟ ಬುತ್ತಿ.


ಇದಕ್ಕೂ ಮುನ್ನ ನಿನ್ನೆ ಮೊದಲ ಇನ್ನಿಂಗ್ಸ್`ನಲ್ಲಿ 322 ರನ್`ಗೆ 6 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾ,  56 ರನ್ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್` ಕಳೆದುಕೊಂಡಿತು. 299 ರನ್`ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ 159/4 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. 459 ರನ್` `ಗಳ ಬೃಹತ್ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭಾರತದ ಗೆಲುವಿಗೆ 7 ವಿಕೆಟ್ ಬೇಕಿದೆ.

ಸಂಕ್ಷಿಪ್ತ ಸ್ಕೋರ್:
ಭಾರತ : 687/ಡಿಕ್ಲೇರ್ ಮತ್ತು 159/4 ಡಿಕ್ಲೇರ್
ಬಾಂಗ್ಲಾದೇಶ : 388 ಮತ್ತು 4ನೇ ದಿನದಾಟದಂತ್ಯಕ್ಕೆ 103/3

ವೆಬ್ದುನಿಯಾವನ್ನು ಓದಿ