ಭಾರತದ ಸ್ಪಿನ್ ದಾಳಿಗೆ ದ.ಆಫ್ರಿಕಾ ಧೂಳೀಪಟ: 79ಕ್ಕೆ ಆಲೌಟ್

ಗುರುವಾರ, 26 ನವೆಂಬರ್ 2015 (11:28 IST)
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 215 ರನ್‌ಗೆ ಆಲೌಟ್ ಆಗಿದ್ದ ಭಾರತದ ಪರ ಸ್ಪಿನ್ನರುಗಳು ಮತ್ತೆ ತಮ್ಮ ಕೈಚಳಕ ತೋರಿಸಿದ್ದು ದಕ್ಷಿಣ ಆಫ್ರಿಕಾ 79 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸರ್ವಪತನ ಕಂಡಿದೆ. ಭಾರತದ ಸ್ಪಿನ್ ದ್ವಯರಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸ್ಪಿನ್ ದಾಳಿಗೆ ದಕ್ಷಿಣ ಆಫ್ರಿಕಾ ಆಟಗಾರರು ಧೂಳೀಪಟವಾಗಿದ್ದಾರೆ.

ಡುಮಿನಿ ಮತ್ತು ಹಾರ್ಮರ್ ಅವರನ್ನು ಹೊರತುಪಡಿಸಿ ದಕ್ಷಿಣ ಆಫ್ರಿಕಾ ಆಟಗಾರರು ಯಾರೊಬ್ಬರೂ ಎರಡಂಕಿ ದಾಟಲಿಲ್ಲ. ಡುಮಿನಿ  65 ಎಸೆತಗಳನ್ನು ಆಡಿ 35 ರನ್ ಹೊಡೆದರೆ, ಹಾರ್ಮರ್ 13 ರನ್ ಬಾರಿಸಿದ್ದಾರೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 136 ರನ್ ಮುನ್ನಡೆ ಸಾಧಿಸಿದೆ.  ನಿನ್ನೆ 2 ವಿಕೆಟ್ ಕಳೆದುಕೊಂಡು 12 ರನ್ ಮಾಡಿದ್ದ ದ.ಆಫ್ರಿಕಾ ಭಾರತದ ಸ್ನಿನ್ನರುಗಳಿಗೆ ನಲುಗಿ ಹೋಯಿತು.

ಅಶ್ವಿನ್ 5 ವಿಕೆಟ್ ಮತ್ತು ಜಡೇಜಾ 4 ವಿಕೆಟ್ ಗಳಿಸಿದ್ದರೆ, ಅಮಿತ್ ಮಿಶ್ರಾ ಒಂದು ವಿಕೆಟ್ ಗಳಿಸಿದರು. ದಕ್ಷಿಣ ಆಫ್ರಿಕಾದ ಖ್ಯಾತ ಬ್ಯಾಟ್ಸ್‌ಮನ್ ಡಿ ವಿಲಿಯರ್ಸ್ ಜಜೇಡಾ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚಿತ್ತು ಶೂನ್ಯಕ್ಕೆ ಔಟಾಗುವ ಮೂಲಕ ದ.ಆಫ್ರಿಕಾ ಪತನಕ್ಕೆ ಮುನ್ನುಡಿ ಬರೆಯಿತು. ಭಾರತದ ಸ್ಪಿನ್ನರುಗಳನ್ನು ಎದುರಿಸಲು ದ.ಆಫ್ರಿಕಾ ಆಟಗಾರರು ಮುಂಚಿನಂತೆ ತಿಣುಕಾಡಿ ವಿಕೆಟ್‌ಗಳನ್ನು ಒಪ್ಪಿಸಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದರು.
 
 ಸ್ಕೋರು ವಿವರ:  ಡೀನ್ ಎಲ್ಗರ್ 7,  ಡುಮಿನಿ 35, ಹಾರ್ಮರ್ 13 
ವಿಕೆಟ್ ಪತನ: 4-1, 9-2, 11-3, 12-4,  12-5, 35-6,  47-7. 66-8 76-9, 79-10
ಬೌಲಿಂಗ್ ವಿವರ: ರವಿಚಂದ್ರನ್ ಅಶ್ವಿನ್ 5 ವಿಕೆಟ್, ರವೀಂದ್ರ ಜಡೇಜಾ 4 ವಿಕೆಟ್, ಅಮಿತ್ ಮಿಶ್ರಾ 1 ವಿಕೆಟ್  

ವೆಬ್ದುನಿಯಾವನ್ನು ಓದಿ