ಬಾಂಗ್ಲಾದೇಶವು ಹೈದರಾಬಾದ್‌ನಲ್ಲಿ ಭಾರತದ ವಿರುದ್ಧ ಒಂದು ಟೆಸ್ಟ್ ಪಂದ್ಯವನ್ನು ಆಡುವುದಾಗಿ ಬಿಸಿಸಿಐ ಪ್ರಕಟಿಸಿದೆ. ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ , ಟೆಸ್ಟ್ ಆಡುವ ಎಲ್ಲಾ ರಾಷ್ಟ್ರಗಳು ಭಾರತಕ್ಕೆ ಬರಲು ಅವಕಾಶನ ನೀಡುವುದು ಮಂಡಳಿಯ ಜವಾಬ್ದಾರಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ಭಾರತ ಬಾಂಗ್ಲಾದೇಶಕ್ಕೆ ಐದು ಬಾರಿ ಪ್ರವಾಸ ಕೈಗೊಂಡಿದ್ದು, ಒಂದು ಪಂದ್ಯವನ್ನು ಕೂಡ ಇದುವರೆಗೆ ಸೋತಿಲ್ಲ.