ವಿಶ್ವಕಪ್‌ಗೆ ಮುನ್ನ ಅಂಡರ್-19 ನಾಯಕ ಇಶಾನ್ ಕಿಶನ್ ಬಂಧನ

ಬುಧವಾರ, 13 ಜನವರಿ 2016 (16:28 IST)
ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಆಟೋರಿಕ್ಷಾಗೆ ಡಿಕ್ಕಿ ಹೊಡೆದ ಪ್ರಕರಣದಲ್ಲಿ ಭಾರತದ ಅಂಡರ್ 19 ಕ್ರಿಕೆಟ್ ತಂಡದ ನಾಯಕ ಇಶಾನ್ ಕಿಶನ್ ಅವರನ್ನು ಪಾಟ್ನಾ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಆಟೋರಿಕ್ಷಾಗೆ ಕಾರು ಗುದ್ದಿದ್ದರಿಂದ ಅದರೊಳಗಿದ್ದ ಪ್ರಯಾಣಿಕರಿಗೆ ಗಾಯವಾಗಿತ್ತು. ಅಪಘಾತದ ಸ್ಥಳದಲ್ಲಿ ಇಶಾನ್ ಇತರೆ ಜನರೊಂದಿಗೆ ಜಗಳಕ್ಕೆ ಇಳಿದಿದ್ದ.
 
ಕಿಶಾನ್ ಅಲ್ಲಿ ನೆರೆದಿದ್ದ ಜನರ ಜತೆ ಜಗಳಕ್ಕೆ ಇಳಿದಿದ್ದರಿಂದ ಕೆಲವರು ಅವನಿಗೆ ಥಳಿಸಿದರು. ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು. ಪೊಲೀಸರು ಕಿಶನ್‌ನನ್ನು ಮತ್ತು ಜಗಳದಲ್ಲಿ ಒಳಗೊಂಡ ಕೆಲವರನ್ನು ಬಂಧಿಸಿದರು. ಕಾರನ್ನು ಕೂಡ ಪೊಲೀಸರು ವಶಕ್ಕೆ ಪಡೆದರು. ಬಿಹಾರದ ನವಾಡ ಜಿಲ್ಲೆಯವನಾದ ಕಿಶನ್ ಜಾರ್ಖಂಡ್ ತಂಡಕ್ಕೆ ಆಡುತ್ತಿದ್ದಾನೆ.
 
 ಜೂನಿಯರ್ ಮತ್ತು ಸ್ಥಳೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ ಕಿಶನ್‌ನನ್ನು ಭಾರತದ ಅಂಡರ್ 19 ನಾಯಕರನ್ನಾಗಿ ಹೆಸರಿಸಲಾಗಿತ್ತು. ರಣಜಿ ಟ್ರೋಫಿಯಲ್ಲಿ 40.99 ಸರಾಸರಿಯೊಂದಿಗೆ 10 ಪಂದ್ಯಗಳಿಂದ 736 ರನ್ ಕಲೆಹಾಕಿದ್ದ. ಅದರಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳು ಸೇರಿದ್ದವು. 
 

ವೆಬ್ದುನಿಯಾವನ್ನು ಓದಿ