ಭಾರತ ಪಿಚ್ ಸ್ಥಿತಿಗೆ ಇಮ್ರಾನ್ ತಾಹಿರ್ ಅಪಾಯಕಾರಿ: ಗಂಗೂಲಿ

ಶನಿವಾರ, 19 ಸೆಪ್ಟಂಬರ್ 2015 (15:58 IST)
ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ದಕ್ಷಿಣ ಆಫ್ರಿಕಾದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಭಾರತದ ಪಿಚ್ ಸ್ಥಿತಿಗಳಿಗೆ ಅಪಾಯಕಾರಿಯಾಗಿದ್ದು, ನಾಲ್ಕು ಟೆಸ್ಟ್ ಸರಣಿಗೆ ಸ್ಕ್ವೇರ್ ಟರ್ನರ್ ಪಿಚ್‌ಗಳನ್ನು ಸಿದ್ಧಪಡಿಸುವ ವಿರುದ್ಧ ಆತಿಥೇಯರಿಗೆ ಎಚ್ಚರಿಸಿದ್ದಾರೆ.
 
ತಾಹಿರ್ ಗುಣಮಟ್ಟದ ಸ್ಪಿನ್ ಬೌಲರ್ ಆಗಿದ್ದು, ಭಾರತದ ಪಿಚ್ ಸ್ಥಿತಿಗೆ ಅವರು ಅಪಾಯಕಾರಿಯಾಗಿದ್ದಾರೆ.  ಭಾರತ ಸ್ಫೋರ್ಟಿಂಗ್ ವಿಕೆಟ್ ಸಿದ್ಧಪಡಿಸಬೇಕೇ ಹೊರತು ಸ್ಕ್ವೇರ್ ಟರ್ನರ್ ವಿಕೆಟ್ ಸಿದ್ಧಪಡಿಸಬಾರದು. ಭಾರತ ಸ್ಕ್ವೇರ್ ಟರ್ನರ್ ವಿಕೆಟ್ ಸಿದ್ಧಪಡಿಸಿದರೆ ತಾಹಿರ್ ಪಂದ್ಯ ವಿಜೇತರಾಗುತ್ತಾರೆ ಎಂದು ಗಂಗೂಲಿ ತಿಳಿಸಿದರು.
 
ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ಮೂರು ಸ್ಪೆಷಲಿಸ್ಟ್ ಸ್ಪಿನ್ನರ್‌ಗಳನ್ನು ಆರಿಸಿದ್ದು, ತಾಹಿರ್ ಮತ್ತು ಆಫ್ ಸ್ಪಿನ್ನರ್ ಡೇನ್ ಪೈಡ್ ಅವರು ಸೈಮನ್ ಹಾರ್ಮರ್ ಜತೆಗೂಡಲಿದ್ದಾರೆ. ಟೆಸ್ಟ್ ತಂಡದಲ್ಲಿ ಹಶೀಮ್ ಆಮ್ಲಾ ಇನ್ನೊಬ್ಬ ಆಫ್ ಬ್ರೇಕ್ ಬೌಲರ್ ಆಗಲಿದ್ದಾರೆ.
 
ಆದರೂ ಆಮ್ಲಾ ತಂಡಕ್ಕೆ ಭಾರತವನ್ನು ಸೋಲಿಸುವುದು ಅಷ್ಟೊಂದು ಸುಲಭವಲ್ಲ ಎಂದು ಹೇಳಿದರು. ಇದೊಂದು ಸುದೀರ್ಘಾವಧಿಯ ಸರಣಿಯಾಗಿದ್ದು, ಎಲ್ಲಾ ನಾಲ್ಕು ಟೆಸ್ಟ್‌ಗಳಲ್ಲಿ ಭಾರತ ಕೆಟ್ಟದಾಗಿ ಆಡುವುದಿಲ್ಲವೆಂದು ಭಾವಿಸುತ್ತೇನೆ. ದಕ್ಷಿಣ ಆಫ್ರಿಕಾ ಭಾರತವನ್ನು ಸೋಲಿಸಲು ತುಂಬಾ ಶ್ರಮಪಡಬೇಕಾಗುತ್ತದೆ ಎಂದು ಗಂಗೂಲಿ ಹೇಳಿದರು.

ವೆಬ್ದುನಿಯಾವನ್ನು ಓದಿ