ಪಾಕ್ ವಿರುದ್ಧ ಸರಣಿಗೆ ಸರ್ಕಾರದ ಅನುಮತಿಗೆ ಕಾಯುತ್ತಿರುವ ಬಿಸಿಸಿಐ: ರಾಜೀವ್ ಶುಕ್ಲಾ

ಸೋಮವಾರ, 30 ನವೆಂಬರ್ 2015 (13:07 IST)
ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಬಾಂಧವ್ಯ ಆರಂಭಕ್ಕೆ ಭಾರತ ಸರ್ಕಾರದ ಪ್ರತಿಕ್ರಿಯೆಯನ್ನು ಬಿಸಿಸಿಐ ಕಾಯುತ್ತಿದೆ ಎಂದು ಬಿಸಿಸಿಐ ಅಧಿಕಾರಿ ರಾಜೀವ್ ಶುಕ್ಲಾ ಶುಕ್ರವಾರ ಹೇಳಿದ್ದಾರೆ.  ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸರ್ಕಾರದಿಂದ ಈಗಾಗಲೇ ಅನುಮತಿ ಪಡೆದಿದ್ದು, ಬಿಸಿಸಿಐ ಇನ್ನೂ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ.  ವಿದೇಶಾಂಗ ವ್ಯವಹಾರಗಳಿಗೆ ನಾವು ಈಗಾಗಲೇ ಅರ್ಜಿ ಹಾಕಿದ್ದೇವೆ.

ಸುಷ್ಮಾ ಸ್ವರಾಜ್ ಕಾಮನ್‌ವೆಲ್ತ್ ಶೃಂಗಸಭೆಯಲ್ಲಿ ಭಾಗವಹಿಸಲು ಮಾಲ್ಟಾದಲ್ಲಿರುವುದರಿಂದ ಅವರ ಹಿಂತಿರುಗಿ ಬರುವುದನ್ನು ಕಾಯುತ್ತಿದ್ದೇವೆ. ಅವರ ವಾಪಸು ಬಂದ ಕ್ಷಣವೇ ಈ ಕುರಿತು ನಿರ್ಧರಿಸುತ್ತೇವೆ ಎಂದು ಶುಕ್ಲಾ ಸುದ್ದಿ ಚಾನೆಲ್‌ಗೆ ಹೇಳಿದರು.
 
 ಎರಡು ಮಂಡಳಿಗಳು ಈಗಾಗಲೇ ನಿರ್ಧಾರ ಕೈಗೊಂಡಿವೆ.  ನಾವು ಈಗ ಸರ್ಕಾರದ ಅನುಮತಿಗೆ ಕಾಯುತ್ತಿದ್ದೇವೆ ಎಂದು ಹೇಳಿದರು.  ಕ್ರೀಡೆಯನ್ನು ರಾಜಕೀಯ ಮತ್ತು ರಾಜತಾಂತ್ರಿಕ ವಿವಾದಗಳಿಂದ ಪ್ರತ್ಯೇಕವಾಗಿಡಬೇಕು ಎಂದು ಶುಕ್ಲಾ ಹೇಳಿದರು
 
 ಕ್ರೀಡೆಗಳನ್ನು ರಾಜಕೀಯ ಮತ್ತು ರಾಜತಾಂತ್ರಿಕ ವಿವಾದಗಳಿಗೆ ಎಳೆಯಬಾರದು. ಸರ್ಕಾರದ ಅನುಮತಿ ಇಲ್ಲದೇ ನಾವು ಪಾಕಿಸ್ತಾನದ ಜತೆ ಸರಣಿಯನ್ನು ನಿರ್ಧರಿಸುವಂತಿಲ್ಲ. ಆದ್ದರಿಂದ ನಾವು ಸರ್ಕಾರಕ್ಕೆ ಪತ್ರ ಬರೆದು ಅದರ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ. ನಾವು ಸರ್ಕಾರ ಪ್ರತಿಕ್ರಿಯಿಸಿದ ಕೂಡಲೇ ಎಲ್ಲರಿಗೂ ತಿಳಿಸುತ್ತೇವೆ ಎಂದು ಶುಕ್ಲಾ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ