ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಏಕದಿನ ಸರಣಿ: ಧೋನಿಗೆ ಅಗ್ನಿಪರೀಕ್ಷೆ

ಶನಿವಾರ, 10 ಅಕ್ಟೋಬರ್ 2015 (14:11 IST)
ಕಿರು ಓವರುಗಳ ಮಾದರಿ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಸೋಲಪ್ಪಿದ್ದರಿಂದ, ನಾಯಕ ಮಹೇಂದ್ರ ಸಿಂಗ್ ಧೋನಿ ಮೇಲೆ ಒತ್ತಡ ಹೆಚ್ಚಿದೆ. ಟೆಸ್ಟ್ ನಾಯಕ ಕೊಹ್ಲಿ ಧೋನಿಯ ಸ್ಥಾನವನ್ನು ಅಲಂಕರಿಸಲು ಕಾಯುತ್ತಿರುವ ಹಂತದಲ್ಲಿ, ಧೋನಿ ಅವರ ನಾಯಕತ್ವ ಕುರಿತಂತೆ ಹೆಚ್ಚೆಚ್ಚು ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. 
 ತಮ್ಮ ಟೀಕಾಕಾರರಿಗೆ ಉತ್ತರಿಸುವ ಸಮಯ ಈಗ ಧೋನಿಗೆ ಒದಗಿಬಂದಿದೆ.

ಬಾಂಗ್ಲಾದೇಶದಲ್ಲಿ ಕೂಡ ಸರಣಿ ಸೋಲಿನ ಬಳಿಕ   ಮೂರು ತಿಂಗಳು ವಿರಾಮ ಅನುಭವಿಸಿದ ಧೋನಿ ಟಿ 20 ಸರಣಿಯನ್ನು ಕಳೆದುಕೊಂಡಿದ್ದು,  ಈಗ ನಾಳೆಯಿಂದ ಆರಂಭವಾಗುವ  ಐದು ಪಂದ್ಯಗಳ ಏಕದಿನ ಸರಣಿಯಲ್ಲಿ  ಅಗ್ನಿಪರೀಕ್ಷೆ ಎದುರಾಗಿದೆ. 
 
ಟಿ 20 ಸರಣಿ ಜಯದ ಬಳಿಕ ದ.ಆಫ್ರಿಕಾ ಆತ್ಮವಿಶ್ವಾಸ ಹೆಚ್ಚಿದ್ದು, ಭಾರತ ಈಗ ಸಮತೋಲಿತ ತಂಡವಾಗಿದ್ದರೂ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆಲವು ಗಳಿಸುವುದು ಅಷ್ಟು ಸುಲಭವಲ್ಲ. ಭಾರತದ ಪರ ಪೇಸ್ ದಾಳಿಗೆ ಇನ್ನಷ್ಟು ಚೇತರಿಕೆ ನೀಡಲು ಉಮೇಶ್ ಯಾದವ್ ತಂಡಕ್ಕೆ ಹಿಂತಿರುಗಿದ್ದು, ಬ್ಯಾಟಿಂಗ್ ಆಲ್‌ರೌಂಡರ್ ಗುರುಕೀರತ್ ಸಿಂಗ್ ಮಾನ್ ಟೀಂ ಇಂಡಿಯಾದಲ್ಲಿ ಚೊಚ್ಚಲ ಪ್ರವೇಶಕ್ಕೆ ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. 
 
ಧೋನಿ ಈ ಮುಂಚಿನ ರೀತಿಯಲ್ಲಿ ಆಟದ ಫಿನಿಷರ್ ಆಗಿ ಉಳಿದಿಲ್ಲ ಮತ್ತು  ನಾಲ್ಕನೇ ಕ್ರಮಾಂಕದಲ್ಲಿ ತಮ್ಮ ಬ್ಯಾಟಿಂಗ್ ಪ್ರದರ್ಶನ ತೋರಲು ಆಸಕ್ತರಾಗಿದ್ದಾರೆ. ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಆರಂಭಿಕ ಆಟಗಾರರಾದ್ದರಿಂದ ಅಂಬಾಟಿ ರಾಯುಡು ಬದಲಿಗೆ ಬಂದಿರುವ ಅಜಿಂಕ್ಯಾ ರಹಾನೆ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಗಿದೆ. ಅಜಿಂಕ್ಯಾ ರಹಾನೆ ನಾಲ್ಕನೇ ಕ್ರಮಾಂಕದಲ್ಲಿ ಈ ಮುಂಚೆ ಆಡುತ್ತಿದ್ದು, ಅದು ಅವರಿಗೆ ಹೊಂದಿಕೆಯಾಗಿತ್ತು. 

ವೆಬ್ದುನಿಯಾವನ್ನು ಓದಿ