ಸರಣಿಗೆ ಮುನ್ನ ಬ್ಯಾಟ್ಸ್‌ಮನ್ ಮನಸ್ಥಿತಿ ಬದಲಾಯಿಸುವುದು ನಿರ್ಣಾಯಕ: ಅನಿಲ್ ಕುಂಬ್ಳೆ

ಗುರುವಾರ, 21 ಜುಲೈ 2016 (11:20 IST)
ಟೆಸ್ಟ್‌ನಲ್ಲಿ ದೀರ್ಘಾವಧಿ ಬ್ಯಾಟಿಂಗ್‌ ಮಾಡುವುದು ಮುಖ್ಯವಾಗಿದ್ದು, ಕಿರು ಓವರುಗಳಿಂದ ದೀರ್ಘ ಮಾದರಿ ಕ್ರಿಕೆಟ್‌ಗೆ ಬ್ಯಾಟ್ಸ್‌ಮನ್ ಮನಸ್ಥಿತಿಯನ್ನು ಬದಲಿಸಬೇಕಾಗಿದೆ ಎಂದು ಟೀಂ ಇಂಡಿಯಾ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಭಾರತದ ಕ್ರಿಕೆಟರುಗಳು ಐಪಿಎಲ್‌ನಲ್ಲಿ ಸುಮಾರು 2 ತಿಂಗಳುಗಳ ಕಾಲ ಆಡಿದ್ದು, ಜಿಂಬಾಬ್ವೆಗೆ ಕಿರು ಪ್ರವಾಸದಲ್ಲಿ ಎರಡು ಏಕದಿನ ಮತ್ತು ಟಿ 20ಗಳನ್ನು ಆಡಿದ್ದರು. ಹೀಗಾಗಿ ಕಿರು ಓವರುಗಳಿಂದ ದೀರ್ಘವಾಧಿ ಮಾದರಿ ಕ್ರಿಕೆಟ್‌ಗೆ ಅವರ ಮನಸ್ಥಿತಿ ಬದಲಿಸಬೇಕಾಗಿದೆ ಎಂದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಬೌಲರುಗಳು ತುಂಬಾ ಬೋರಿಂಗ್ ಆಗಿರಬೇಕು ಎಂದು ಕುಂಬ್ಳೆ ಹೇಳಿದರು.

ಬೌಲಿಂಗ್ ವಿಭಾಗದಲ್ಲಿ ಸ್ಥಿರವಾದ ಲೆಂಗ್ತ್‌ಗಳನ್ನು ಎಸೆಯುವ ಮೂಲಕ ಬೋರಿಂಗ್ ಆಗಿರಬೇಕು. ಟೆಸ್ಟ್ ಕ್ರಿಕೆಟ್ ಆಡುವಾಗ ಹಾಗೆ ಮಾಡುವ ಅಗತ್ಯವಿರುತ್ತದೆ. ಕ್ಯಾಚ್ ಕಡೆ ಕೂಡ ಮಹತ್ವ ನೀಡಬೇಕಿದ್ದು, ಪಂದ್ಯಗಳನ್ನು ಗೆಲ್ಲುವುದಕ್ಕೆ ಅವು ಮುಖ್ಯವಾಗಿದೆ ಎಂದು ಕುಂಬ್ಳೆ ಟ್ವಿಟರ್‌ನಲ್ಲಿ ಪ್ರಶ್ನೋತ್ತರ ಸೆಷನ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ