ನಾಯಕಿ ಮಿಥಾಲಿ ರಾಜ್ ಅವರ ಅಜೇಯ 81 ರನ್ ನೆರವಿನಿಂದ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ನಾಲ್ಕನೇ ಏಕದಿನದಲ್ಲಿ ಎಂಟು ವಿಕೆಟ್ಗಳಿಂದ ಸೋಲಿಸುವ ಮೂಲಕ ಐದು ಪಂದ್ಯಗಳ ಸರಣಿಯನ್ನು 2-2ರಿಂದ ಡ್ರಾ ಮಾಡಿಕೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 221 ರನ್ ಬೆನ್ನಟ್ಟಿದ ಆತಿಥೇಯರು 34 ಎಸೆತಗಳು ಬಾಕಿವುಳಿದಿರುವಂತೆ ಗೆಲುವು ಗಳಿಸಿತು. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮಿಥಾಲಿ ಸ್ಮೃತಿ ಮಂದನಾ(66) ಜೊತೆಗೆ 2ನೇ ವಿಕೆಟ್ಗೆ 124 ರನ್ ಜೊತೆಯಾಟವಾಡಿದರು.