ಭಾರತ-ವೆಸ್ಟ್ ಇಂಡೀಸ್ ಏಕದಿನ: ಬ್ಯಾಟಿಗರಿಂದ ಮತ್ತೆ ನಿರಾಶೆ

ಬುಧವಾರ, 9 ಫೆಬ್ರವರಿ 2022 (17:21 IST)
ಅಹಮ್ಮದಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿದೆ.

ಇತ್ತೀಚೆಗಿನ ದಿನಗಳಲ್ಲಿ ಭಾರತದ ಬ್ಯಾಟಿಂಗ್ ದಯನೀಯ ಸ್ಥಿತಿಯಲ್ಲಿದೆ. ದೊಡ್ಡ ಮೊತ್ತ ಪೇರಿಸಲು ಬ್ಯಾಟಿಗರು ಪರದಾಡುತ್ತಿದ್ದಾರೆ. ಅದು ವೆಸ್ಟ್ ಇಂಡೀಸ್ ನಂತಹ ತಂಡದ ವಿರುದ್ಧ ಅದೂ ತವರಿನಲ್ಲಿಯೂ ಮುಂದುವರಿದಿದೆ.

ನಾಯಕ ರೋಹಿತ್ ಶರ್ಮಾ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಅನುಭವಿ ಕೊಹ್ಲಿ 18, ಬಡ್ತಿ ಪಡೆದು ಆರಂಭಿಕರಾಗಿ ಬಂದ ರಿಷಬ್ ಪಂತ್ ಕೂಡಾ 18 ರನ್ ಗಳಿಸಿ ಔಟಾದರು. ಬಿಗ್ ಥ್ರೀ ಬ್ಯಾಟಿಗರು ರನ್ ಗಳಿಸಲು ವಿಫಲವಾಗಿದ್ದು ತಂಡಕ್ಕೆ ಹೊಡೆತ ನೀಡಿತು.

ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ 49, ಸೂರ್ಯಕುಮಾರ್ ಯಾದವ್ 64 ರನ್ ಗಳಿಸಿ ತಂಡಕ್ಕೆ ಆಧಾರವಾದರು. ವಾಷಿಂಗ್ಟನ್ ಸುಂದರ್ ಟೆಸ್ಟ್ ಶೈಲಿಯಲ್ಲಿ ಆಡಿ 24 ರನ್ ಗಳಿಸಿದರು. ದೀಪಕ್ ಹೂಡಾ ಬಿರುಸಿನ 29 ರನ್ ಗಳಿಸಿ ಔಟಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ