ಭಾರತ-ವೆಸ್ಟ್ ಇಂಡೀಸ್ ದ್ವಿತೀಯ ಏಕದಿನ ಇಂದು: ಮತ್ತೊಂದು ರನ್ ಮಳೆಯಾಗುತ್ತಾ?
ಬುಧವಾರ, 24 ಅಕ್ಟೋಬರ್ 2018 (08:53 IST)
ವಿಶಾಖಪಟ್ಟಣ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ದ್ವಿತೀಯ ಏಕದಿನ ಪಂದ್ಯ ಇಂದು ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಮತ್ತೊಂದು ರನ್ ಮಳೆ ನಿರೀಕ್ಷಿಸಲಾಗಿದೆ.
ವಿಶಾಖಪಟ್ಟಣ ಕೂಡಾ ಬ್ಯಾಟಿಂಗ್ ಗೆ ಹೇಳಿ ಮಾಡಿಸಿದ ಪಿಚ್. ಭಾರತದ ಅಗ್ರ ಬ್ಯಾಟ್ಸ್ ಮನ್ ಗಳ ಸದ್ಯದ ಫಾರ್ಮ್ ನೋಡಿದರೆ ಮತ್ತೊಂದು ರನ್ ಮಳೆ ಗ್ಯಾರಂಟಿ ಎಂಬಂತಾಗಿದೆ.
ಇತ್ತ ವಿಂಡೀಸ್ ನಲ್ಲೂ ಬ್ಯಾಟಿಂಗ್ ನಲ್ಲಿ ಸುಧಾರಿತ ಪ್ರದರ್ಶನ ಕಂಡುಬಂದಿದೆ. ಹೀಗಾಗಿ ಭಾರತ ಬೌಲರ್ ಗಳನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಬೇಕಿದೆ. ಕಳೆದ ಪಂದ್ಯದಲ್ಲಿ ರನ್ ಬಿಟ್ಟುಕೊಟ್ಟ ಮೊಹಮ್ಮದ್ ಶಮಿಗೆ ಕೊಕ್ ನೀಡಿ, ಕುಲದೀಪ್ ಯಾದವ್ ಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ. ಚಿನ್ನಾಮನ್ ಬೌಲರ್ ಸೀಮಿತ ಓವರ್ ಗಳ ಪಂದ್ಯದಲ್ಲಿ ಭಾರೀ ಪರಿಣಾಮ ಬೀರುತ್ತಾರೆ. ಹೀಗಾಗಿ ವಿರಾಟ್ ಕೊಹ್ಲಿ ತಂಡದ ಬೌಲಿಂಗ್ ವಿಭಾಗದಲ್ಲಿ ಕೊಂಚ ಬದಲಾವಣೆ ಮಾಡುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.