ಭಾರತಕ್ಕೆ ''ಲಕ್ಕಿ''ಯಾದ ಹೋಲ್ಕರ್ ಸ್ಟೇಡಿಯಂನಲ್ಲಿ 2ನೇ ಏಕದಿನ ಪಂದ್ಯ

ಸೋಮವಾರ, 12 ಅಕ್ಟೋಬರ್ 2015 (20:48 IST)
ದ. ಆಫ್ರಿಕಾ ವಿರುದ್ಧ ಭಾರತ ಎರಡನೇ ಏಕದಿನ ಪಂದ್ಯವನ್ನು ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಆಡಲಿದೆ. ಭಾರತ ಅಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಿದ್ದು, ಎಲ್ಲೂ ಮೂರು ಪಂದ್ಯಗಳನ್ನು ಗೆದ್ದುಕೊಂಡಿರುವುದರಿಂದ ಭಾರತದ ಪಾಲಿಗೆ ಹೋಲ್ಕರ್ ಸ್ಟೇಡಿಯಂ ಲಕ್ಕಿ ಎನಿಸಿದೆ.

 ಈ ಮೈದಾನದಲ್ಲಿ ಏಕ ದಿನ ಪಂದ್ಯ ನಡೆಯದೇ ಸುಮಾರು ನಾಲ್ಕು ವರ್ಷಗಳಾಗಿವೆ. ವೀರೇಂದ್ರ ಸೆಹ್ವಾಗ್ ವೆಸ್ಟ್ ಇಂಡೀಸ್ ವಿರುದ್ಧ ಮನೋಜ್ಞ 219 ರನ್ ಸ್ಕೋರ್ ಮಾಡಿ 153 ರನ್‌ಗಳಿಂದ ಜಯಗಳಿಸಿ ನಾಲ್ಕು ವರ್ಷಗಳ ಬಳಿಕ ಹೋಲ್ಕರ್ ಸ್ಟೇಡಿಯಂನಲ್ಲಿ ಭಾರತ ಆಡಲಿಳಿಯುತ್ತಿದೆ. 2006 ಮತ್ತು 2008ರಲ್ಲಿ ಇಂಗ್ಲೆಂಡ್ ವಿರುದ್ಧ ಇದೇ ಮೈದಾನದಲ್ಲಿ ನಡೆದ  ಎರಡು ಏಕದಿನ ಪಂದ್ಯಗಳಲ್ಲಿ ಕೂಡ ಭಾರತ 7 ಮತ್ತು 54 ರನ್‌ಗಳಿಂದ ಜಯಗಳಿಸಿದೆ. 
 
 ಹೋಲ್ಕರ್ ಮೈದಾನದಲ್ಲಿ ಬೃಹತ್ ಸ್ಕೋರ್‌ಗಳು ಈ ಮೈದಾನದಲ್ಲಿ ಇನ್ನೊಂದು ಕ್ರಿಕೆಟ್ ಹಬ್ಬವನ್ನು ನಿರೀಕ್ಷಿಸುವುದಕ್ಕೆ ಸಂಕೇತವಾಗಿದೆ. ಭಾರತ ಈ ಮೈದಾನದಲ್ಲಿ 289 ರನ್ ಗಡಿಯನ್ನು ಯಶಸ್ವಿಯಾಗಿ ಮುಟ್ಟಿ ಜಯಗಳಿಸಿದೆ. ಇನ್ನೆರಡು ಸಂದರ್ಭಗಳಲ್ಲಿ ಭಾರತ ಮೊದಲ ಬ್ಯಾಟಿಂಗ್ ಮಾಡಿ 292 ಮತ್ತು 418 ರನ್ ಸ್ಕೋರ್ ಮಾಡಿದೆ. 

ವೆಬ್ದುನಿಯಾವನ್ನು ಓದಿ