ಇಮ್ರಾನ್ ತಾಹಿರ್ ಬೌಲಿಂಗ್ ಸಮರ್ಪಕವಾಗಿ ಎದುರಿಸಬೇಕು: ಸಚಿನ್ ತೆಂಡೂಲ್ಕರ್

ಶುಕ್ರವಾರ, 25 ಸೆಪ್ಟಂಬರ್ 2015 (18:47 IST)
ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಸ್ವದೇಶಿ ಸರಣಿಯಲ್ಲಿ ದ.ಆಫ್ರಿಕಾ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಬೌಲಿಂಗನ್ನು ಪ್ರತಿಭಾಶಾಲಿ ಭಾರತದ ಬ್ಯಾಟಿಂಗ್ ಲೈನ್‌ಅಪ್ ಸಮರ್ಪಕವಾಗಿ ಎದುರಿಸಬೇಕು ಎಂದು ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಸಲಹೆ ಮಾಡಿದ್ದಾರೆ.  ವಿಕೆಟ್ ಕಬಳಿಸುವ ಬೌಲರ್ ಎಂದು ಹೆಗ್ಗಳಿಕೆಗೆ ಹೆಸರಾದ ತಾಹಿರ್ ಅವರನ್ನು 9 ತಿಂಗಳ ನಂತರ ದಕ್ಷಿಣ ಆಫ್ರಿಕಾ ತಂಡಕ್ಕೆ ಪುನಃ ಕರೆಸಲಾಗಿದೆ. 
 
ಹರಿಣಗಳು ನವದೆಹಲಿಯಲ್ಲಿ ಸೆ. 29ರಂದು ಟಿ 20 ಅಭ್ಯಾಸ ಪಂದ್ಯದಿಂದ ಪ್ರವಾಸವನ್ನು ಆರಂಭಿಸಲಿದ್ದಾರೆ. ಇದರ ಬೆನ್ನ ಹಿಂದೆ ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳು, ಐದು ಏಕ ದಿನ ಪಂದ್ಯಗಳು ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿವೆ.42 ವರ್ಷದ ಆಟಗಾರ ಇಡೀ ಭಾರತದ ತಂಡವನ್ನು ಮುಕ್ತ ಕಂಠದಿಂದ ಹೊಗಳಿ, ಅವರ ಆಟ 
ಡಿ ವಿಲಿಯರ್ಸ್ ಮತ್ತು ಹಶೀಮ್ ಆಮ್ಲಾ ಅವರು ಪ್ರಬಲ ಆಟಗಾರರಾಗಿದ್ದು, ಡೇಲ್ ಸ್ಟೇನ್ ಮತ್ತು ಮಾರ್ನ್ ಮಾರ್ಕೆಲ್ ಅವರ ಆಟವನ್ನೂ ಕಡೆಗಣಿಸಲು ಸಾಧ್ಯವಿಲ್ಲ. ಗೂಗ್ಲಿ ವಿಷಯ ಹೇಳುವುದಾದರೆ ಇಮ್ರಾನ್ ತಾಹಿರ್ ಗೂಗ್ಲಿಯಲ್ಲಿ ಉತ್ತಮ ಬೌಲರ್. ಅವರ ವಿರುದ್ಧ ನಾವು ಸಮರ್ಪಕವಾಗಿ ಆಡಬೇಕಿದ್ದು, ಅವರು ಪ್ರಮುಖ ಬೌಲರುಗಳಲ್ಲಿ ಒಬ್ಬರಾಗುವ ಸಂಭವವಿದೆ ಎಂದು ತೆಂಡೂಲ್ಕರ್ ಹೇಳಿದರು.

ತೆಂಡೂಲ್ಕರ್ ಅವರನ್ನು  ಓಕ್ಸಿಜನ್ ಕಂಪನಿ ಬ್ರಾಂಡ್ ರಾಯಭಾರಿಯಾಗಿ ನೇಮಿಸಿದ್ದು, ವರದಿಗಾರರ ಜತೆ ಮಾತನಾಡುತ್ತಿದ್ದರು.  42 ವರ್ಷದ ಮಾಜಿ ಆಟಗಾರ ಇಡೀ ಭಾರತ ತಂಡವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು ಮತ್ತು ಟೀಂ ಇಂಡಿಯಾವನ್ನು ಅದ್ಭುತ ಮತ್ತು ಬದ್ಧತೆಯ ತಂಡ ಎಂದು ವರ್ಣಿಸಿದರು. 

ವೆಬ್ದುನಿಯಾವನ್ನು ಓದಿ