ಭಾರತ-ಪಾಕಿಸ್ತಾನ ಸರಣಿಗೆ ಇನ್ನೂ ಹಸಿರು ನಿಶಾನೆ ನೀಡದ ಭಾರತ ಸರ್ಕಾರ

ಗುರುವಾರ, 26 ನವೆಂಬರ್ 2015 (14:38 IST)
ಇದೇ ಡಿಸೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ಪಾಕಿಸ್ತಾನದ ವಿರುದ್ಧ ಸರಣಿಯನ್ನು ಆಡುವ ಬಗ್ಗೆ ಭಾರತ ತಂಡಕ್ಕೆ ಹಸಿರು ನಿಶಾನೆ ನೀಡುವುದಕ್ಕೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ.  ಆದರೆ ಈ ನಿರ್ಧಾರ ಕೈಗೊಳ್ಳುವುದಕ್ಕೆ ಪಾಕಿಸ್ತಾನ ಭಯೋತ್ಪಾದನೆ ಸಂಘಟನೆಗಳಿಗೆ ತನ್ನ ಬೆಂಬಲ ಮುಂದುವರಿಸುತ್ತಿರುವುದು ಅಡ್ಡಿ ಬಂದಿದೆ.

ಗಡಿಯಾಚೆಯಿಂದ ಭಯೋತ್ಪಾದನೆಗೆ ಕುಮ್ಮಕ್ಕು ಮುಂದುವರಿದಿರುವ ನಡುವೆ ಕ್ರಿಕೆಟ್ ಸರಣಿಗೆ ಅನುಮತಿ ನೀಡಿದರೆ ದೇಶದ ನೈತಿಕ ಸ್ಥೈರ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆಂಬುದನ್ನು ಕೂಡ ನಾವು ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. 
 
ಮಂಡಳಿಯು ವಿದೇಶಾಂಗ ಸಚಿವಾಲಯಕ್ಕೆ ಔಪಚಾರಿಕ ಮನವಿ ಮೂಲಕ ಪಾಕಿಸ್ತಾನ ವಿರುದ್ಧ ಸರಣಿಗೆ ಅನುಮತಿ ಕೋರಿದೆ.  ಐಸಿಸಿ ಭವಿಷ್ಯದ ಪ್ರವಾಸಿ ಕಾರ್ಯಕ್ರಮಕ್ಕೆ ಬದ್ಧವಾಗಿರಲು ಬಿಸಿಸಿಐ ಪಾಕಿಸ್ತಾನದಲ್ಲಿ ಪರಿಸ್ಥಿತಿ ಸೂಕ್ತವಾಗಿಲ್ಲದಿದ್ದರೆ ಯುಎಇ ಅಥವಾ ತಟಸ್ಥ ಮೈದಾನದಲ್ಲಿ ಆಡಲು ಬದ್ಧವಾಗಿದೆ ಎಂದು ಮನದಟ್ಟು ಮಾಡಿದ್ದಾರೆ. ಬಿಸಿಸಿಐ ಮತ್ತು ಪಿಸಿಬಿ ಜತೆ ಚರ್ಚೆ ಬಳಿಕ ಶ್ರೀಲಂಕಾದಲ್ಲಿ ಆಡಲು ಎರಡೂ ತಂಡಗಳು ನಿರ್ಧರಿಸಿವೆ ಎಂದು ಠಾಕುರ್ ಮಾಧ್ಯಮಕ್ಕೆ ಹೇಳಿದರು. 

ವೆಬ್ದುನಿಯಾವನ್ನು ಓದಿ