ದೇಶದಲ್ಲಿರುವ ಎರಡು ಕ್ರೀಡಾಂಗಣಗಳು ತೀರಾ ಕಳಪೆ ಮಟ್ಟದ್ದು: ಕೆವಿನ್ ಪೀಟರ್ಸನ್

ಸೋಮವಾರ, 6 ಜೂನ್ 2016 (16:10 IST)
ಭಾರತದಲ್ಲಿರುವ ಎರಡು ಕ್ರಿಕೆಟ್ ಕ್ರೀಡಾಂಗಣಗಳು ಅತಿ ಕಳಪೆ ಮಟ್ಟದ್ದಾಗಿವೆ ಎಂದು ಇಂಗ್ಲೆಂಡ್ ಬ್ಯಾಟ್ಸ್‌ಮೆನ್ ಕೆವಿನ್ ಪೀಟರ್ಸನ್ ಹೇಳಿದ್ದಾರೆ. 
 
ಕಾನ್ಪುರ್‌ನಲ್ಲಿರುವ ಗ್ರೀನ್ ಪಾರ್ಕ್ ಕ್ರೀಡಾಂಗಣ ಮತ್ತು ಅಹಮದಾಬಾದ್‌ನಲ್ಲಿರುವ ಮೋಟೆರಾ ಕ್ರೀಡಾಂಗಣ ನಾನು ಆಡಿದ ಕ್ರೀಡಾಂಗಣಗಳಲ್ಲೇ ಅತ್ಯಂತ ಕಳಪೆ ಮಟ್ಟದಾಗಿವೆ ಎಂದು ತಿಳಿಸಿದ್ದಾರೆ. 
 
ಮುಂಬೈನ ವಾಂಖೇಡೆ ಕ್ರೀಡಾಂಗಣ ವಿಶ್ವದ 10 ಉತ್ತಮ ಕ್ರೀಡಾಂಗಣಗಳಲ್ಲಿ ಸ್ಥಾನ ಪಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.
 
ಕಳೆದ 2012ರಲ್ಲಿ ವಾಂಖೇಡೆ ಕ್ರೀಡಾಂಗಣದಲ್ಲಿ ಉತ್ತಮ ಪ್ರದರ್ಶನ ನೀಡಿದ ಪೀಟರ್ಸನ್, 186 ರನ್ ಗಳಿಸಿ ಇಂಗ್ಲೆಂಡ್ ತಂಡವನ್ನು ಗೆಲ್ಲಿಸಿದ್ದರು. 
 
ಇತರ ಅತ್ಯುತ್ತಮ ನಾನು ಇಷ್ಟಪಡುವ 9 ಕ್ರೀಡಾಂಗಣಗಳಲ್ಲಿ  ಅಡಿಲೇಡ್, ದಿ ಓವಲ್, ಟ್ರಿನಿಡಾಡ್, ಎಂಸಿಜಿ, ಕಿಂಗ್ಸ್‌ಮಿಡ್, ಹೆಡ್ಡಂಗ್ಲೆ, ಸೆಂಚೂರಿಯನ್ ಸೇರಿವೆ ಎಂದು ಇಂಗ್ಲೆಂಡ್ ಬ್ಯಾಟ್ಸ್‌ಮೆನ್ ಕೆವಿನ್ ಪೀಟರ್ಸನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ