ಶ್ರೀಲಂಕಾ ವಿರುದ್ಧ ಏಕದಿನ ಗೆಲುವು ಕಂಡ ಹರ್ಮನ್ ಪ್ರೀತ್ ಪಡೆ
ಶುಕ್ರವಾರ, 1 ಜುಲೈ 2022 (16:36 IST)
ಪಲ್ಲಿಕೆಲೆ: ಶ್ರೀಲಂಕಾ ಮತ್ತು ಭಾರತ ಮಹಿಳಾ ಕ್ರಿಕೆಟ್ ತಂಡದ ನಡುವೆ ನಡೆದ ಮೊದಲ ಏಕದಿನ ಪಂದ್ಯವನ್ನು ಹರ್ಮನ್ ಪ್ರೀತ್ ಕೌರ್ ಪಡೆ 4 ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಲಂಕಾ 48.2 ಓವರ್ ಗಳಲ್ಲಿ 171 ರನ್ ಗಳಿಗೆ ಆಲೌಟ್ ಆಗಿತ್ತು. ಲಂಕಾ ಪರ ನೀಲಸಾಕ್ಷಿ ಡಿ ಸಿಲ್ವಾ 43, ಹಾಸಿನಿ ಪೆರೆರಾ 37 ರನ್ ಗಳಿಸಿದರು. ಭಾರತದ ಪರ ಉತ್ತಮ ದಾಳಿ ಸಂಘಟಿಸಿದ ರೇಣುಕಾ ಸಿಂಗ್, ದೀಪ್ತಿ ಶರ್ಮಾ ತಲಾ 3 ವಿಕೆಟ್ ತಮ್ಮದಾಗಿಸಿಕೊಂಡರು. ಉಳಿದಂತೆ ಪೂಜಾ ವಸ್ತ್ರಾಕರ್ 2, ರಾಜೇಶ್ವರಿ ಗಾಯಕ್ ವಾಡ್, ಹರ್ಮನ್ ಪ್ರೀತ್ ಕೌರ್ ತಲಾ 1 ವಿಕೆಟ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತದ ಪರ ಶಪಾಲಿ ವರ್ಮ 35 ರನ್ ಗಳಿಸಿದರು. ಆದರೆ ನಂತರ ಸ್ಮೃತಿ ಮಂಥನಾ, ಯಶಿಕಾ ಭಾಟಿಯಾ ಬೇಗನೇ ಔಟಾದರು. ಆದರೆ ನಾಯಕಿಯ ಆಟವಾಡಿದ ಹರ್ಮನ್ ಪ್ರೀತ್ ಕೌರ್ 44, ಹರ್ಲಿನ್ ಡಿಯೋಲ್ 34 ರನ್ ಗಳಿಸಿ ಆಧಾರವಾದರು. ಕೊನೆಯಲ್ಲಿ ದೀಪ್ತಿ ಶರ್ಮಾ ಅಜೇಯ 22, ಪೂಜಾ ವಸ್ತ್ರಾಕರ್ ಬಿರುಸಿನ 21 ರನ್ ಗಳಿಸಿ ತಂಡದ ಗೆಲುವು ಖಚಿತಪಡಿಸಿದರು. ಲಂಕಾ ಪರ ಇನೋಕಾ ರಣವೀರ 4 ವಿಕೆಟ್ ಕಬಳಿಸಿದರು. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಸಾಧಿಸಿತು.