ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ 2027 ರ ವಿಶ್ವಕಪ್ ಕನಸಿಗೆ ಬಿಸಿಸಿಐ ಕೊಳ್ಳಿ

Krishnaveni K

ಬುಧವಾರ, 6 ಆಗಸ್ಟ್ 2025 (10:15 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಯುವ ಭಾರತೀಯ ತಂಡ ಯಶಸ್ಸು ಸಾಧಿಸಿದ ಬೆನ್ನಲ್ಲೇ ಈಗ ಬಿಸಿಸಿಐ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜೊತೆ ಮಾತುಕತೆ ನಡೆಸಲು ಮುಂದಾಗಿದ್ದು ಈ ಸ್ಟಾರ್ ಆಟಗಾರರ 2027 ರ ವಿಶ್ವಕಪ್ ಆಡುವ ಕನಸಿಗೆ ಕೊಳ್ಳಿಯಿಡುವ ಸಾಧ್ಯತೆಯಿದೆ.

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಗೈರಿನಲ್ಲೂ ಶುಭಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ 2-2 ರಿಂದ ಸರಣಿ ಸಮಬಲಗೊಳಿಸಲು ಸಾಧ್ಯವಾಗಿದೆ. ಸರಣಿಯುದ್ದಕ್ಕೂ ಈ ಆಟಗಾರರ ಕೊರತೆ ಕಾಡದಂತೆ ಯುವ ಬ್ಯಾಟಿಗರು ನೋಡಿಕೊಂಡಿದ್ದಾರೆ.

ಇದೇ ಕಾರಣಕ್ಕೆ ಈಗ ಶುಭಮನ್ ಗಿಲ್ ಗೇ ಏಕದಿನ ನಾಯಕತ್ವವನ್ನೂ ನೀಡಲು ಬಿಸಿಸಿಐ ಒಲವು ತೋರಿದೆ. ಏಕದಿನ ವಿಶ್ವಕಪ್ ಗೆ ಇನ್ನೂ ಎರಡು ವರ್ಷವಿದೆ. ಈಗಾಗಲೇ ಈ ದಿಗ್ಗಜರು ಟಿ20 ಮತ್ತು ಟೆಸ್ಟ್ ಮಾದರಿಯಿಂದ ನಿವೃತ್ತರಾಗಿದ್ದಾರೆ. ಅಪರೂಪಕ್ಕೆ ಏಕದಿನ ಸರಣಿಯಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಎರಡು ವರ್ಷ ಕಳೆಯುವಷ್ಟರಲ್ಲಿ ಇಬ್ಬರೂ 40 ರ ಹರೆಯಕ್ಕೆ ಕಾಲಿಟ್ಟಿರುತ್ತಾರೆ. ಟೀಂ ಇಂಡಿಯಾದಲ್ಲಿ ಇವರ ಜಾಗ ತುಂಬಬಲ್ಲ ಯುವ ಆಟಗಾರರಿರುತ್ತಾರೆ. ಹೀಗಾಗಿ ಈ ಇಬ್ಬರೂ ಆಟಗಾರರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನವಿದೆಯೇ, ಅಥವಾ ವಿಶ್ವಕಪ್ ಗೆ ಮುನ್ನ ಇಬ್ಬರಿಗೂ ನಿವೃತ್ತಿಯಾಗಲು ಸೂಚನೆ ನೀಡಲಾಗುತ್ತದೆಯೇ ಎಂಬ ಬಗ್ಗೆ ಬಿಸಿಸಿಐ ಚರ್ಚೆ ನಡೆಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ