ಮಹಿಳಾ ಟಿ20 ವಿಶ್ವಕಪ್: ಭಾರತಕ್ಕಿಂದು ಮಹತ್ವದ ಪಂದ್ಯ
ಲೀಗ್ ಹಂತದ ನಾಲ್ಕನೇ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಪಡೆ ಇಂದು ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ಗೆ ಪ್ರಬಲ ಪೈಪೋಟಿಯೊಡ್ಡಿದ್ದರೂ ದೊಡ್ಡ ಮೊತ್ತ ಚೇಸ್ ಮಾಡುವಲ್ಲಿ ಭಾರತ ಕೂದಲೆಳೆಯಲ್ಲಿ ಎಡವಿತ್ತು.
ರಿಚಾ ಘೋಷ್ ಅತ್ಯುತ್ತಮ ಫಾರ್ಮ್ ನಲ್ಲಿರುವುದು ಭಾರತಕ್ಕೆ ಪ್ಲಸ್ ಪಾಯಿಂಟ್. ಆದರೆ ಸ್ಮೃತಿ, ರಿಚಾಗೆ ಸಾಥ್ ಕೊಡುವವರು ಯಾರೂ ಇಲ್ಲದೇ ಇರುವುದು ವಿಪರ್ಯಾಸ. ಹರ್ಮನ್ ಪ್ರೀತ್ ಕೌರ್ ತಮ್ಮ ಖ್ಯಾತಿಗೆ ತಕ್ಕ ಆಡಬೇಕಿದೆ. ಜೆಮಿಮಾ ರೊಡ್ರಿಗಸ್ ಮೂರನೇ ಕ್ರಮಾಂಕಕ್ಕೆ ತಕ್ಕ ಆಟವಾಡುತ್ತಿಲ್ಲ. ಬೌಲಿಂಗ್ ನಲ್ಲಿ ಭಾರತ ಇದುವರೆಗಿನ ಪಂದ್ಯದಲ್ಲಿ ಮಧ್ಯಮ ಓವರ್ ಗಳಲ್ಲಿ ರನ್ ನಿಯಂತ್ರಿಸಲು ವಿಫಲವಾಗುತ್ತಿದೆ. ಜೊತೆಗೆ ಫೀಲ್ಡಿಂಗ್ ನಲ್ಲೂ ಸುಧಾರಣೆ ಕಾಣಬೇಕಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 6.30 ಕ್ಕೆ ಆರಂಭವಾಗುವುದು.